-->

ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿ: ದೇಶದ ಮೊದಲ ಮಿಸ್​ ಯೂನಿವರ್ಸ್ ಸ್ಪರ್ಧಿಯಾಗಲಿದ್ದಾರೆ ರೂಮಿ ಅಲ್ಖಾಹ್ತಾನಿ

ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿ: ದೇಶದ ಮೊದಲ ಮಿಸ್​ ಯೂನಿವರ್ಸ್ ಸ್ಪರ್ಧಿಯಾಗಲಿದ್ದಾರೆ ರೂಮಿ ಅಲ್ಖಾಹ್ತಾನಿ



ರಿಯಾದ್: ಸೌದಿ ಅರೇಬಿಯಾ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಹಲವಾರು ಬದಲಾವಣೆಗಳಾಗುತ್ತಿದೆ. ಸಾಂಪ್ರದಾಯಿಕ ಇಸ್ಲಾಮಿಕ್ ಸ್ಟೇಟ್ ‘ಸೌದಿ ಅರೇಬಿಯಾ’ ತನ್ನ ಮೂಲಭೂತವಾದವನ್ನು ನಿಧಾನವಾಗಿ ಸರಳೀಕರಿಸಿ ಅಧುನಿಕತೆಯತ್ತ ಮುಖ ಮಾಡುತ್ತಿದೆ.

ಸದ್ಯ ದೇಶದಲ್ಲಿ ಮಹಿಳೆಯರ ಮೇಲಿನ ಕೆಲ ನಿರ್ಬಂಧಗಳನ್ನು ರಾಜಾಡಳಿತ ಸಡಿಲಗೊಳಿಸಲು ತೆಗೆದು ಹಾಕಲು ಆರಂಭಿಸಿದೆ. ಇದರಂಗವಾಗಿ ಮಹಿಳೆಯರಿಗೆ ಮಹಿಳಾ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಇದೇ ಪ್ರಪ್ರಥಮ ಭಾರಿಗೆ ಭಾಗವಹಿಸುತ್ತಿದೆ. ಸೌದಿ ಅರೇಬಿಯಾದ ಪರವಾಗಿ ರೂಮಿ ಅಲ್ಖಾಹ್ತಾನಿ ಎಂಬವರು “ಮಿಸ್ ಯೂನಿವರ್ಸ್” ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.  

ಸೌದಿ ಅರೇಬಿಯಾದ ಇತಿಹಾಸದಲ್ಲೇ ಮೊದಲ ಮಿಸ್​ ಯೂನಿವರ್ಸ್ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ರೂಮಿ ಅಲ್ಖಾಹ್ತಾನಿ ಎನಿಸಿಕೊಳ್ಳಲಿದ್ದಾರೆ. 27 ವರ್ಷದ ರೂಪದರ್ಶಿ ರೂಮಿ ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸೌದಿಯ ರಾಜಧಾನಿ ರಿಯಾದ್‌ ನವರಾದ ಅಲ್ಖಾಹ್ತಾನಿ, ಕೆಲವು ವಾರಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಮಿಸ್ ಅಂಡ್ ಮಿಸೆಸ್ ಗ್ಲೋಬಲ್ ಏಷ್ಯನ್‌ನಲ್ಲಿ ಭಾಗವಹಿಸಿದ ಇತಿಹಾಸ ಸೃಷ್ಟಿಸಿದ್ದರು.

ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ದೇಶದ ಪ್ರಥಮ ಮಹಿಳೆಯಾಗಿದ್ದರು. ಈ ಮೂಲಕ ಸೌದಿ ಅರೇಬಿಯಾ ಕೂಡ ನಿಧಾನವಾಗಿ ಆಧುನಿಕತೆಗೆ ತೆರೆದುಕೊಳ್ಳುತ್ತಿದೆ. ಈಗಾಗಲೇ ಕಟ್ಟುನಿಟ್ಟಾದ ಮದ್ಯಪಾನ ನಿಷೇಧಕ್ಕೆ ಹೆಸರುವಾಸಿಯಾಗಿರುವ ಸೌದಿ ಅರೇಬಿಯಾ, ಮುಸ್ಲಿಮೇತರ ರಾಜತಾಂತ್ರಿಕರಿಗೆ ಮದ್ಯವನ್ನು ಖರೀದಿಸಲು ಅನುಮತಿ ನೀಡಿದೆ. ಇದರ ಜೊತೆಗೆ ಮಹಿಳೆಯರಿಗೆ ವಾಹನ ಚಲಾಯಿಸಲು, ಗಂಡು-ಹೆಣ್ಣು ಒಟ್ಟಾಗಿ ಕಾರ್ಯಕ್ರಮಗಳಿಗೆ ಹಾಜರಾಗಲು ಮತ್ತು ಪುರುಷ ಪಾಲಕತ್ವವಿಲ್ಲದೆ ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article