-->
ರಸಮಂಜರಿ ಕಲಾವಿದೆಯ ಮೇಲೆ ಸಾಮೂಹಿಕ ಅತ್ಯಾಚಾರ : ಇಬ್ಬರು ಅರೆಸ್ಟ್

ರಸಮಂಜರಿ ಕಲಾವಿದೆಯ ಮೇಲೆ ಸಾಮೂಹಿಕ ಅತ್ಯಾಚಾರ : ಇಬ್ಬರು ಅರೆಸ್ಟ್


ರಾಂಚಿ: ರಸಮಂಜರಿ ತಂಡದ ನರ್ತಕಿಯ ಮೇಲೆ  ಮೂವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಪಲಮು ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನವಾಗಿದ್ದು, ಮತ್ತೋರ್ವ ನಾಪತ್ತೆಯಾಗಿದ್ದಾನೆ.

ಕಾಮುಕರು ಸಂತ್ರಸ್ತೆಯ ಪರಿಚಿತರೇ ಆಗಿದ್ದಾರೆ. ಸದ್ಯ ಮೂರನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುದ್ದಾರೆ. ಅಜಯ್ ಕುಮಾರ್ ಹಾಗೂ ದೀವಾನ್ ಕುಮಾ‌ರ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗೋಲು ಕುಮಾರ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ರಸಮಂಜರಿ ಪ್ರದರ್ಶನವೊಂದಕ್ಕೆ ನರ್ತಕಿಯನ್ನು ಆರೋಪಿಗಳ ಪೈಕಿ ಗೋಲು ಕುಮಾ‌ರ್ ಎಂಬಾತ ಆಹ್ವಾನಿಸಿದ್ದ. ಆದರೆ ಈ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಗೋಲು ಕುಮಾರ್ ನ ಕೊಠಡಿಯಲ್ಲಿ ಸಂತ್ರಸ್ತೆ ತಂಗಿದ್ದಳು. ಈ ವೇಳೆ ಆಕೆಗೆ ತಂಪು ಪಾನೀಯವನ್ನು ನೀಡಲಾಗಿದೆ. ಇದನ್ನು ಸೇವಿಸಿದ ಬಳಿಕ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಆ ಬಳಿಕ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ರಾಕೇಶ್ ಸಿಂಗ್ ಹೇಳಿದ್ದಾರೆ. ಸದ್ಯ ಮೂವರ ವಿರುದ್ಧವೂ ಐಪಿಸಿ ಸೆಕ್ಷನ್ 328 ಮತ್ತು 376(2) ಅನ್ವಯ ಪ್ರಕರಣ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article