ನವದೆಹಲಿ: ಕೇವಲ 2 ತಿಂಗಳ ಅಂತರದಲ್ಲಿ ನಾಲ್ವರು ನೀಲಿ ಚಿತ್ರತಾರೆಯರು ದುರಂತವಾಗಿ ಮೃತಪಟ್ಟ ವಿಚಾರ ಪೋರ್ನ್ ಉದ್ಯಮದಲ್ಲಿ ಭಾರಿ ತಲ್ಲಣವನ್ನು ಸೃಷ್ಟಿಸಿದೆ. ಅಷ್ಟಕ್ಕೂ ಈ ಉದ್ಯಮದಲ್ಲಿ ಏಕೆ ಹೀಗೆ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ.
ಥೈನಾ ಫೀಲ್ಡ್ ಎಂಬಾಕೆ ಜನವರಿ 6ರಂದು ಮೃತಪಟ್ಟರೆ, ಜಸ್ಸಿ ಜಾನೆ, ಜನವರಿ 24ರಂದು ಸಾವಿಗೀಡಾಗಿದ್ದಾರೆ. ಅದೇ ರೀತಿ ಫೆಬ್ರವರಿ 15 ರಂದು ಕಾಗೇ ಲಿನ್ ಕಾರ್ಟರ್ ಹಾಗೂ ಮಾರ್ಚ್ 1ರಂದು ಸೋಫಿಯಾ ಲಿಯೋನ್ ಮೃತಪಟ್ಟಿದ್ದಾರೆ. ಈ ಎಲ್ಲರೂ ತಮ್ಮ ಕಿರಿಯ ವಯಸ್ಸಿನಲ್ಲೇ ಸಾವಿನ ಮನೆಯನ್ನು ಸೇರಿದ್ದಾರೆ. ಸೋಫಿಯಾ ಲಿಯೋನ್ ಕೂಡಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಇವರ ಸಾವಿಗೆ ಕಾರಣವೇನೆಂಬುದು ಇನ್ನೂ ನಿಗೂಢವಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಪೆರು ಮೂಲದ ಥೈನಾ ಫೀಲ್ಡ್, ಜನವರಿ 6ರಂದು ತಮ್ಮ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆ ಬಳಿಕ ಆಕೆ ಮೃತಪಟ್ಟಿರುವುದು ಖಾತರಿಯಾಗಿದೆ. ಸಾವಿಗೆ ಕೆಲವೇ ದಿನಗಳ ಹಿಂದಷ್ಟೇ ಅವರು ಪೋರ್ನ್ ಇಂಡಸ್ಟ್ರಿಯಲ್ಲಿ ನಡೆಯುವ ರಾಜಕೀಯ ವಿರುದ್ಧ ಮಾತನಾಡಿದ್ದರು. ಜಸ್ಸಿ ಜಾನೆ ಡ್ರಗ್ಸ್ ಓವರ್‌ಡೋಸ್ ಆಗಿ ಸಾವಿಗೀಡಾಗಿದ್ದರು ಮತ್ತು ಕಾಗ್ನಿ ಲಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡರು.
ಇದೀಗ ಮತ್ತೊಬ್ಬ ಪೋರ್ನ್ ಸ್ಟಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಕೆಯ ಹೆಸರು ಎಮಿಲಿ ವಿಲ್ಲಿಸ್. ಈಕೆ ಕಳೆದ ತಿಂಗಳು ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮತ್ತೊಮ್ಮೆ ಹೃದಯಾಘಾತವಾಗಿ ಕೋಮಾಗೆ ಜಾರಿದ್ದಾರೆ. ಎಮಿಲಿ ಸ್ಥಿತಿ ಗಂಭೀರವಾಗಿದೆ ಎಂದು ಆಕೆಯ ತಂದೆ ಮೈಕೆಲ್ ವಿಲ್ಲಿಸ್ ಮಾಹಿತಿ ನೀಡಿದ್ದಾರೆ. ಸದ್ಯ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಡ್ರಗ್ಸ್ ಓವರ್‌ಡೋಸ್ ಆಗಿ ಈ ರೀತಿ ಆಗಿದೆ ಎನ್ನಲಾಗಿದೆ. ಎರಡು ವರ್ಷಗಳ ಹಿಂದಷ್ಟೇ ಎಮಿಲಿ ಅಡಲ್ಟ್ ಇಂಡಸ್ಟ್ರಿ ತೊರೆದಿದ್ದರು. ಆದರೆ, ಡ್ರಗ್ಸ್‌ಗೆ ದಾಸಳಾಗಿದ್ದರಿಂದ ಅನಾರೋಗ್ಯಕ್ಕೀಡಾಗಿದ್ದಳು. ಇದೀಗ ಆಕೆಯ ಸ್ಥಿತಿಯು ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಖ್ಯಾತ ನೀಲಿ ತಾರೆಯರು ಸಾಲು ಸಾಲಾಗಿ ಸಾಯುತ್ತಿರುವುದು ಪೋರ್ನ್ ಇಂಡಸ್ಟ್ರಿಯಲ್ಲಿ ಒಂದು ರೀತಿಯ ತಲ್ಲಣವನ್ನು ಸೃಷ್ಟಿಸಿದೆ. ಈ ನಟಿಯರು ಅಡಲ್ಟ್ ಕ್ಷೇತ್ರದಲ್ಲಿ ತಮ್ಮ ದೇಹ ಹಾಗೂ ಭವಿಷ್ಯವನ್ನು ತ್ಯಾಗ ಮಾಡಿ ಕೇವಲ ಹಣಕ್ಕಾಗಿ ನಟಿಸುತ್ತಾರೆ. ಇದೇ ಸಂದರ್ಭದಲ್ಲಿ ಈ ನಟಿಯರ ಮೇಲೆ ತೀವ್ರ ಒತ್ತಡ ಇರುವ ಕಾರಣದಿಂದ ಬಹುತೇಕ ನೀಲಿ ತಾರೆಯರು ಡ್ರಗ್ಸ್ ವ್ಯಸನಿಗಳಾಗುತ್ತಾರೆ. ಅದರಲ್ಲೂ ಕಿರಿಯ ವಯಸ್ಸಿನಲ್ಲಿ ಸಾವಿನ ಕದು ತಟ್ಟುತ್ತಿರುವುದರಿಂದ ಈ ಅಡಲ್ಟ್ ಇಂಡಸ್ಟ್ರಿಯಲ್ಲಿ ನಿಜವಾಗಿ ಏನಾಗುತ್ತಿದೆ ಎಂಬ ಅನುಮಾನ ಶುರುವಾಗಿದೆ.