-->

ದೇವಸ್ಥಾನದ ಗೋಪುರ ಕಟ್ಟಲು ಬಂದವನೊಂದಿಗೆ ಸಲುಗೆ - ಮದ್ಯಕ್ಕೆ ನಿದ್ರೆ ಮಾತ್ರೆ ಬೆರೆಸಿ ಕತ್ತು ಹಿಸುಕಿ ಕೊಲೆಗೈದ ಪಾಪಿ ಪತ್ನಿ

ದೇವಸ್ಥಾನದ ಗೋಪುರ ಕಟ್ಟಲು ಬಂದವನೊಂದಿಗೆ ಸಲುಗೆ - ಮದ್ಯಕ್ಕೆ ನಿದ್ರೆ ಮಾತ್ರೆ ಬೆರೆಸಿ ಕತ್ತು ಹಿಸುಕಿ ಕೊಲೆಗೈದ ಪಾಪಿ ಪತ್ನಿ


ರಾಯಚೂರು: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿರುವ ಘಟನೆ ರಾಯಚೂರಿನ ಸಿಂಗನೋಡಿ ತಾಂಡಾದಲ್ಲಿ ನಡೆದಿದೆ.

ರಾಜು ನಾಯ್ಕ (38) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಸ್ನೇಹಾ ಕೊಲೆ ಆರೋಪಿ.

ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂದು ಪತಿಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

ರಾಜು ನಾಯ್ಕ ಹಾಗೂ ಸ್ನೇಹಾ ಏನೂ ತೊಂದರೆಯಿಲ್ಲದೆ ಸಂಸಾರ ನಡೆಸುತ್ತಿದ್ದಾರೆ. ಆದರೆ ಇವರಿದ್ದ ಗ್ರಾಮದ ದೇವಸ್ಥಾನದ ಗೋಪುರ ಕಟ್ಟಲು ಬಂದಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯೊಂದಿಗೆ ಸ್ನೇಹಾ ಸಲುಗೆ ಬೆಳೆಸಿದ್ದಳು. ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕದ್ದು ಮುಚ್ಚಿ ಆತನೊಟ್ಟಿಗೆ ಸೇರುತ್ತಿದ್ದಳು. ಒಂದು ದಿನ ಪತಿ ರಾಜುಗೆ ಈ ವಿಚಾರ ತಿಳಿಯಿತು. ಇದನ್ನು ಇಲ್ಲಿಗೆ ನಿಲ್ಲಿಸುವಂತೆ ಹಲವು ಬಾರಿ ಪತ್ನಿಗೆ ಬುದ್ದಿವಾದ ಹೇಳಿದ್ದಾನೆ. ಈ ಕುರಿತಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಲೆ ಇತ್ತು. ಆದರೆ ಸ್ನೇಹ ಮಾತ್ರ ಬದಲಾಗಿರಲಿಲ್ಲ.

ಅಲ್ಲದೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಮುಗಿಸಿಬಿಡುವ ಪ್ಲಾನ್ ಮಾಡಿದ್ದಳು. ಪತಿಗಿದ್ದ ಕುಡಿತವನ್ನೇ ಬಂಡವಾಳ ಮಾಡಿಕೊಂಡ ಸ್ನೇಹಾ, ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಳು. ಅದನ್ನೂ ಕುಡಿಯುತ್ತಿದ್ದಂತೆ ರಾಜು ನಿದ್ರೆಗೆ ಜಾರಿದ್ದಾನೆ. ಆಗ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಈ ಸಂಬಂಧ ಯಾಪಲದಿನ್ನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article