ಸಹೋದರನ ಮದುವೆಗೆ ಬಂದ ವೀಡಿಯೋಗ್ರಾಫರ್ ನೊಂದಿಗೆ ವರನ ತಂಗಿ ಪರಾರಿ : ಅಪ್ರಾಪ್ತೆಯ ಹುಡುಕಾಟಕ್ಕೆ ಠಾಣೆಯ ಮೆಟ್ಟಿಲೇರಿದ ಕುಟುಂಬ


ಮುಜಾಫರ್‌ಪುರ: ಮದುವೆಯ ವೀಡಿಯೋ ಚಿತ್ರೀಕರಣಕ್ಕೆಂದು ಬಂದಿದ್ದ ವೀಡಿಯೋಗ್ರಾಫರ್ ವರನ ಸಹೋದರಿಯೊಂದಿಗೆ ಓಡಿಹೋಗಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಇದೀಗ ಈ ಅಪ್ರಾಪ್ತ ಬಾಲಕಿಯ ಕುಟುಂಬ ಪೊಲೀಸರ ಮೊರೆ ಹೋಗಿದೆ.

ಅಪ್ರಾಪ್ತೆಯ ಮದುವೆ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ಮದುವೆ ದೃಶ್ಯ ಸೆರೆ ಹಿಡಿಯಲು ಬಂದಿದ್ದ ವೀಡಿಯೊಗ್ರಾಫರ್, ವರನ ಅಪ್ರಾಪ್ತ ತಂಗಿಯೊಂದಿಗೆ ಮಾತಾಡಿದ್ದಾನೆ. ಇಬ್ಬರ ನಡುವೆ ಸಲುಗೆ ಬೆಳೆದಿದೆ. ಇತ್ತ ಮದುವೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವೀಡಿಯೋಗ್ರಾಫರ್ ನೊಂದಿಗೆ ವರನ ತಂಗಿ ಓಡಿಹೋಗಿದ್ದಾಳೆ.

ವಿವಾಹ ಮುಗಿಯುತ್ತಿದ್ದಂತೆ ವರನ ಸಹೋದರಿ ಎಲ್ಲೂ ಕಾಣದೇ ನಾಪತ್ತೆಯಾಗಿದ್ದಾಳೆ. ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿದಾಗ ವೀಡಿಯೊಗ್ರಾಫರ್ ಯುವಕ ವರನ ಅಪ್ರಾಪ್ತ ಸಹೋದರಿಯೊಂದಿಗೆ ಪರಾರಿಯಾಗಿರುವುದು ತಿಳಿದುಬಂದಿದೆ. ನಂತರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, “ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.