ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ತಪ್ಪಿಸಿಕೊಂಡ ಕಾಳಿಂಗ ಸರ್ಪ
Friday, March 22, 2024
ಮಂಗಳೂರು: ಇಲ್ಲಿನ ಪಿಲಿಕುಳ ನಿಸರ್ಗಧಾಮದಲ್ಲಿದ್ದ ಕಾಳಿಂಗ ಸರ್ಪವೊಂದು ಶುಕ್ರವಾರ ಬೆಳಗ್ಗೆ ತಪ್ಪಿಸಿಕೊಂಡು ಹೋಗಿ ಕೆಲಕಾಲ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ.
ಪಿಲಿಕುಳ ಜೈವಿಕ ಉದ್ಯಾನವನದಿಂದ ತಪ್ಪಿಸಿಕೊಂಡ ಈ ಈ ಕಾಳಿಂಗ ಸರ್ಪ ರಸ್ತೆ ದಾಟಿ ಸೈನ್ಸ್ ಸಂಟರ್ ನತ್ತ ಸಾಗುತ್ತಿತ್ತು. ತಕ್ಷಣ ಇದನ್ನು ಗಮನಿಸಿ ನಿಸರ್ಗಧಾಮದ ಸಿಬ್ಬಂದಿಯ ಸಹಾಯದಿಂದ ಹಿಡಿದು ಕಾಳಿಂಗ ಸರ್ಪದ ಸಂತಾನೋತ್ಪತ್ತಿ ಕೇಂದ್ರಕ್ಕೆ ಸಾಗಿಸಲಾಯಿತು. ಗೂಡು ಸರಿಯಾದ ನಿರ್ವಹಣೆ ಇಲ್ಲದಿದ್ದರಿಂದಲೇ ಈ ಕಾಳಿಂಗ ಸರ್ಪ ತಪ್ಪಿಸಿಕೊಂಡು ಹೋಗಲು ಕಾರಣ ಎಂದು ಹೇಳಲಾಗುತ್ತಿದೆ.