BJP ಟಿಕೆಟ್- ದ.ಕ ಕ್ಕೆ ಬ್ರಜೇಶ್ ಚೌಟ, ಉಡುಪಿಗೆ ಕೋಟಾ



ಮಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾಗಿದೆ‌.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದ ನಳಿನ್ ಕುಮಾರ್ ಕಟೀಲುಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಅವರ ಬದಲಿಗೆ ಬ್ರಜೇಶ್ ಚೌಟ ಅವರಿಗೆ ಟಿಕೆಟ್ ನೀಡಲಾಗಿದೆ.


ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಟಿಕೆಟ್ ತಪ್ಪಿದ್ದು, ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಅಭ್ಯರ್ಥಿ ಮಾಡಲಾಗಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕೋಟಾ ಶ್ರೀನಿವಾಸ ಪೂಜಾರಿಗೆ ಟಿಕೆಟ್ ಘೋಷಿಸಲಾಗಿದೆ.

ಇನ್ನು ಮೈಸೂರಿನಿಂದ  ಪ್ರತಾಪ್‌ ಸಿಂಹಗೆ ಟಿಕೆಟ್ ತಪ್ಪಿದ್ದು, ಯಧುವೀರ್ ಒಡೆಯರ್ ಗೆ ಟಿಕೆಟ್ ನೀಡಲಾಗಿದೆ.


ಬೆಂಗಳೂರು ಗ್ರಾಮಾಂತರ- ಡಾ. ಸಿ ಎನ್ ಮಂಜುನಾಥ್

ಕಲಬುರಗಿ- ಡಾ ಉಮೇಶ್ ಜಾಧವ್

ಬಳ್ಳಾರಿ- ಶ್ರೀರಾಮುಲು

ಹಾವೇರಿ- ಬಸವರಾಜ ಬೊಮ್ಮಾಯಿ

ಬಾಗಲಕೋಟೆ- ಪಿ ಸಿ ಗದ್ದಿಗೌಡರ

ವಿಜಯಪುರ- ರಮೇಶ್ ಜಿಗಜೊಣಗಿ

ಬೀದರ್- ಭಗವಂತ ಖೂಬಾ

ಧಾರವಾಡ- ಪ್ರಹ್ಲಾದ ಜೋಶಿ

ತುಮಕೂರು- ಸೋಮಣ್ಣ

ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ

ಚಾಮರಾಜನಗರ- ಎಸ್ ಬಾಲರಾಜ್