-->

ಕಡಬ: ಏಕಮುಖ ಪ್ರೀತಿ - ಒಲ್ಲದ ಯುವತಿಗೆ ಆ್ಯಸಿಡ್ ದಾಳಿ

ಕಡಬ: ಏಕಮುಖ ಪ್ರೀತಿ - ಒಲ್ಲದ ಯುವತಿಗೆ ಆ್ಯಸಿಡ್ ದಾಳಿ


ಕಡಬ: ಕಾಲೇಜು ಆವರಣದಲ್ಲಿ ಕುಳಿತಿದ್ದ ಯುವತಿಯ ಮೇಲೆ ಯುವಕನೊಬ್ಬ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಕಡಬದಲ್ಲಿ ನಡೆದಿದೆ. ಈ ಆ್ಯಸಿಡ್ ದಾಳಿಯಿಂದ ಜೊತೆಗಿದ್ದ ಮತ್ತಿಬ್ಬರು ಯುವತಿಯರಿಗೂ ಅಲ್ಪಪ್ರಮಾಣದ ಗಾಯಗಳಾಗಿವೆ. 

ಕೇರಳ ಮೂಲದ ಅಲೀನಾ ಸಿಬಿ, ಅರ್ಚನಾ, ಅಮೃತಾ ಆ್ಯಸಿಡ್ ದಾಳಿಗೊಳಗಾದ ವಿದ್ಯಾರ್ಥಿನಿಯರು. ಕಡಬ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಕೇರಳ ಮೂಲದ ಅಭಿನ್ ಎಂಬ ಯುವಕ ಆ್ಯಸಿಡ್ ಎರಚಿದ್ದೇನೆ. ಆರೋಪಿ ತಲೆಗೆ ಟೋಪಿ ಧರಿಸಿ, ಮುಖಕ್ಕೆ ಮಾಸ್ಕ್ ಧರಿಸಿ ಕೃತ್ಯ ಎಸಗಿದ್ದಾನೆ. ಸ್ಥಳದಿಂದ ಪಾರಾಗಲು ಯತ್ನಿಸಿದ್ದನು. ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ‌. ಏಕಮುಖ ಪ್ರೀತಿಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಆರೋಪಿ ಕೇರಳದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಆತ ಕಡಬಕ್ಕೆ ಬಂದು ಈ ಕೃತ್ಯ ಎಸಗಿದ್ದಾನೆ. ಓರ್ವ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ, ಆದರೆ ಅದು ಜೊತೆಗಿದ್ದವರ ಮೇಲೂ ಸಿಡಿದು ಅವರಿಗೂ ಗಾಯವಾಗಿದೆ. ಓರ್ವಳಿಗೆ ಗಂಭೀರ ಗಾಯಗಳಾಗಿದ್ದು, ಮತ್ತಿಬ್ಬರು ಪಾರಾಗಿದ್ದಾರೆ.  

Ads on article

Advertise in articles 1

advertising articles 2

Advertise under the article