ಮಂಗಳೂರು: 4,000 ರೂ. ಲಂಚ ಪಡೆಯುತ್ತಿದ್ದಾಗಲೇ ಸರ್ವೇಯರ್ ಲೋಕಾಯುಕ್ತ ಬಲೆಗೆ
Thursday, March 7, 2024
ಮಂಗಳೂರು: ನಗರದಲ್ಲಿ ನಾಲ್ಕು ಸಾವಿರ ರೂ.ಪಾಯಿ ಲಂಚ ಪಡೆಯುತ್ತಿದ್ದಾಗಲೇ ಸರ್ವೇಯರ್ ಒಬ್ಬ ರೆಡ್ ಹ್ಯಾಂಡ್ ಆಗಿ ಲೋಕಯುಕ್ತ ಬಲೆಗೆ ಬಿದ್ದಿದ್ದಾನೆ.
ಭೂಮಾಪನ ಕಚೇರಿಯ ಸರ್ವೇಯರ್ ಶೀತಲ್ ರಾಜ್ ಲೋಕಾಯುಕ್ತ ಬಲೆಗೆ ಬಿದ್ದವನು.
ಭೂಮಿಯನ್ನು ಫೋಡಿ ಮಾಡಿಕೊಡಲು ರಾಜೇಶ್ ಎಂಬವರಲ್ಲಿ ಶೀತಲ್ ರಾಜ್ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ರಾಜೇಶ್, ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಸರ್ವೆಯರ್ ಶೀತಲ್ ರಾಜ್ ನನ್ನು ಟ್ರ್ಯಾಪ್ ಮಾಡಿ ನಾಲ್ಕು ಸಾವಿರ ರೂ. ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಎಸ್ ಪಿ ಸೈಮನ್, ಡಿವೈಎಸ್ ಪಿ ಚಲುವರಾಜ್ ನೇತೃತ್ವದಲ್ಲಿ ದಾಳಿ ನಡೆಸಿ ಸರ್ವೇಯರ್ ಶೀತಲ್ ರಾಜ್ ನನ್ನು ಬಂಧಿಸಿದ್ದಾರೆ.