ಮಂಗಳೂರು: ನ್ಯುಮೋನಿಯಾ ಕಾಯಿಲೆಗೆ ತುತ್ತಾಗಿ ಬಾಲಕಿ ಮೃತ್ಯು
Thursday, February 22, 2024
ಮಂಗಳೂರು: ಇಲ್ಲಿನ ಮರೋಡಿ ಗ್ರಾಮದ ಬಾಲಕಿಯೊಬ್ಬಳು ನ್ಯುಮೋನಿಯಾ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾಳೆ.
ಮರೋಡಿ ಗ್ರಾಮದ ನಿವಾಸಿ ಜಯಾನಂದ ಮತ್ತು ರಾಗಾಶ್ರೀ ದಂಪತಿಯ ಪುತ್ರಿ ಆಶ್ರಿಜಾ (7) ಮೃತಪಟ್ಟ ಬಾಲಕಿ.
ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಆಶ್ರಿಜಾಳನ್ನು ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತುನಿಗಾ ಘಟಕದಲ್ಲಿ ದಾಖಲಾಗಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಫೆ.22ರಂದು ಮುಂಜಾವಿನ ವೇಳೆಗೆ ಮೃತಪಟ್ಟಿದ್ದಾಳೆ. ಆಶ್ರಿಜಾ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.