ಉಳ್ಳಾಲ: ಟಿಪ್ಪು ಸುಲ್ತಾನ್ ಕಟೌಟ್ ತೆರವಿಗೆ ಡಿವೈಎಫ್ಐಗೆ ನೊಟೀಸ್


ಉಳ್ಳಾಲ: ತಾಲೂಕಿನ ಪಾವೂರಿನ ಹರೇಕಳದ ಡಿವೈಎಫ್ಐ ಕಚೇರಿ ಬಳಿ ಅಳವಡಿಸಿರುವ ಟಿಪ್ಪು ಸುಲ್ತಾನ್ ಕಟೌಟ್ ತೆರವು ಮಾಡಲು ಕೊಣಾಜೆ ಠಾಣಾ ಪೊಲೀಸರು ಡಿವೈಎಫ್ಐಗೆ ನೋಟಿಸ್ ಜಾರಿಗೊಳಿಸಿದ್ದಾರೆ. 

ಡಿವೈಎಫ್ಐನಿಂದ ತೊಕ್ಕೊಟ್ಟಿನ ಯುನಿಟಿ ಗ್ರ್ಯಾಂಡ್ ನಲ್ಲಿ ನಡೆಯುವ 12ನೇ ರಾಜ್ಯ ಸಮ್ಮೇಳನದ ಅಂಗವಾಗಿ ಕಾರ್ಡ್ ಬೋರ್ಡ್ ನಿಂದ ನಿರ್ಮಿಸಲಾದ ಆರು ಅಡಿ ಉದ್ದದ ಟಿಪ್ಪುವಿನ ಕಟೌಟ್ ಅನ್ನು ಅಳವಡಿಸಲಾಗಿತ್ತು. ಆದರೆ ಈ ಕಟೌಟ್ ಅಳವಡಿಸಲು ಅನುಮತಿ ಪಡೆದಿರಲಿಲ್ಲ. ಆದ್ದರಿಂದ ಕೊಣಾಜೆ ಪೊಲೀಸರು ಈ ಕಟೌಟ್ ತೆರವು ಮಾಡಲು ನೋಟಿಸ್ ಜಾರಿಗೊಳಿಸಿದೆ.


ಟಿಪ್ಪು ಸುಲ್ತಾನ್ ಕಟೌಟ್ , ಬ್ಯಾನರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಯಾವ ಸರಕಾರ ನಿಷೇಧ ಹೇರಿದ್ದು? ಕರ್ನಾಟಕದಲ್ಲಿ ಸರಕಾರ ಬದಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಿಜೆಪಿ ಸರಕಾರ ಇದೆಯೇ? ಕಾಂಗ್ರೆಸ್ ಸರಕಾರದ ಕಾಲದಲ್ಲೂ ಸಂಘಿ ಮನಸ್ಥಿತಿಯಲ್ಲೆ ಪೋಲೀಸರು ಕೆಲಸ ಮಾಡುತ್ತಿದ್ದಾರೆ. ಟಿಪ್ಪು ಕಟೌಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಕೊಟ್ಟಿಚೆನ್ನಯರ ಪ್ರತಿಮೆ ಸೇರಿದಂತೆ ಎಲ್ಲಾ ಆದರ್ಶರ, ಮಹಾತ್ಮರ ಕಟೌಟ್ , ಬ್ಯಾನರ್ ಗಳಿಗೆ ಡಿವೈಎಫ್ಐ ಕಾರ್ಯಕರ್ತರು ಕಾವಲು ನಿಂತು ಕಾಯುತ್ತಾರೆ ಎಂದು ಡಿವೈಎಫ್ಐ ಹೇಳಿದೆ.