-->

ಮಂಗಳೂರು: ಕುಮಾರಪರ್ವತ ಕಾರಣ ಮಾಡಲು ಇನ್ನು ಮುಂದೆ ಆನ್ಲೈನ್ ಬುಕ್ಕಿಂಗ್ - ಈಶ್ವರ ಖಂಡ್ರೆ

ಮಂಗಳೂರು: ಕುಮಾರಪರ್ವತ ಕಾರಣ ಮಾಡಲು ಇನ್ನು ಮುಂದೆ ಆನ್ಲೈನ್ ಬುಕ್ಕಿಂಗ್ - ಈಶ್ವರ ಖಂಡ್ರೆ

ಮಂಗಳೂರು:  ಇನ್ನು ಮುಂದೆ ಕುಮಾರ ಪರ್ವತ ಚಾರಣ ಮಾಡಬೇಕಾದ್ರೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಗೆ ಸರಕಾರದಿಂದ ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಇತ್ತೀಚೆಗೆ ಸಾವಿರಾರು ಮಂದಿ ಚಾರಣಿಗರು ಒಂದೇ ದಿನ ಕುಮಾರ ಪರ್ವತಕ್ಕೆ ಚಾರಣ ಮಾಡಿ ಜನಜಂಗುಳಿ ಸೃಷ್ಟಿಯಾಗಿ ಭಾರೀ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಈಶ್ವರ ಬಿ ಖಂಡ್ರೆ ಕುಮಾರ ಪರ್ವತಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನಗರದ ಪಡೀಲ್ ನ ಅರಣ್ಯ ಭವನದಲ್ಲಿ ಮಾಹಿತಿ ನೀಡಿದ ಅವರು, ಕುಮಾರ ಪರ್ವತ ಟ್ರೆಕ್ಕಿಂಗ್ ಎಂದು ಜನಜಂಗುಳಿ ಸೇರಿ ಪರಿಸರ ಹಾನಿಯ ಭೀತಿ ಎದುರಾಗಿದೆ. ಆದ್ದರಿಂದ ಚಾರಣ ನಿಯಂತ್ರಣ ಸಂಬಂಧ ಸಮಗ್ರ ಯೋಜನಾ ವರದಿ ತಯಾರಿಸಿ ಅದನ್ನು ಸರಕಾರಕ್ಕೆ ಸಲ್ಲಿಸಿ ಆನ್ಲೈನ್ ವ್ಯವಸ್ಥೆ ಮಂಜೂರಾತಿ ಮಾಡಲು ಸೂಚಿಸಿದ್ದೇನೆ ಎಂದರು.

ಏಕಾಏಕಿ ಸಾವಿರಾರು ಮಂದಿ ಚಾರಣ ಹೋದಲ್ಲಿ ಇಕ್ಕಟ್ಟಾಗಿ ಸಮಸ್ಯೆ ಎದುರಾಗಲಿದೆ. ಆದ್ದರಿಂದ ದಿನಕ್ಕೆ ಎಷ್ಟು ಜನ ಹೋಗಬಹುದೆಂದು ನೋಡಿ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಮಿತಿ ಹಾಕಿ‌ಯೇ ಚಾರಣಿಗರಿಗೆ ನಾವು ಪಾಸ್ ಗಳನ್ನು ಕೊಡಲಾಗುತ್ತದೆ‌. ನಿಯಮ ಮೀರಿ ಯಾರಿಗೂ‌ ಬರಲು ಅವಕಾಶ‌ ಕೊಡುವುದಿಲ್ಲ. ಚಾರಣ ನಿಯಂತ್ರಣವನ್ನ ಮಾಡಬೇಕಾದಲ್ಲಿ ಆನೈನ್ ಬುಕ್ಕಿಂಗ್ ಅಗತ್ಯವಿದೆ ಎಂದು ಈಶ್ವರ ಬಿ ಖಂಡ್ರೆ ಹೇಳಿದರು.



*ಸಿಆರ್ ಝಡ್ ವ್ಯಾಪ್ತಿಯೊಳಗೆ ಅಕ್ರಮ ರೆಸಾರ್ಟ್, ಹೋಮ್ ಸ್ಟೇ ಗಳಿದ್ದರೆ ನಿರ್ದಾಕ್ಷಿಣ್ಯ ಕ್ರಮ*



ಸಿಆರ್ ಝಡ್ ವ್ಯಾಪ್ತಿಯೊಳಗಡೆ ಹಲವೆಡೆ‌ ಅಕ್ರಮ ಕಟ್ಟಡಗಳ ನಿರ್ಮಾಣದ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಅಕ್ರಮ ರೆಸಾರ್ಟ್, ಹೋಮ್ ಸ್ಟೇ ಗಳಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಬಿ‌.ಖಂಡ್ರೆ ಹೇಳಿದರು.

ಈ ಭಾಗದಲ್ಲಿ ಮೂರು ಎಕರೆಗಿಂತ ಕಡಿಮೆ ಬೇಸಾಯ ಮಾಡುವ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಅರಣ್ಯ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ.‌ ಜೊತೆಗೆ‌ ಅರಣ್ಯ ಮತ್ತು‌ ಕಂದಾಯ ಇಲಾಖೆಯ ಜಂಟಿ ಸರ್ವೇ ಆಗಬೇಕಿದೆ. ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಅಪಾರ ಹಾನಿಯಾಗುತ್ತಿದೆ. ಕರಾವಳಿ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಗುರಿಯಿದೆ. ಕಾಡ್ಗಿಚ್ಚು ನಿಯಂತ್ರಣಕ್ಕೆ ಅರಣ್ಯ ಇಲಾಖೆಗೆ ಪ್ರತ್ಯೇಕ ಹೆಲಿಕಾಪ್ಟರ್ ಅವಶ್ಯಕತೆಯಿಲ್ಲ. ಅವಶ್ಯಕತೆ ಇದ್ದರೆ ಖಾಸಗಿ ಹೆಲಿಕಾಪ್ಟರ್ ಗಳ ಬಳಕೆ ಮಾಡಲಾಗುತ್ತದೆ ಎಂದರು.




Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article