-->

ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ?- ಸರಳ ಆರೋಗ್ಯದ ಟಿಪ್ಸ್ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ

ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ?- ಸರಳ ಆರೋಗ್ಯದ ಟಿಪ್ಸ್ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ


ಈಗಿನ  ಜಂಜಾಟದ ಜೀವನದಲ್ಲಿ ನಮ್ಮ ಆರೋಗ್ಯದ ಕಾಳಜಿಯನ್ನು  ವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ  ಆರೋಗ್ಯದ ಕಾಳಜಿ ಅಗತ್ಯ

ಹಾಗಾಗಿ  ಆರೋಗ್ಯದ ಮೇಲೆ ಗಮನ ಹರಿಸುವುದು ಸೂಕ್ತ . ಫಾಸ್ಟ್ ಫುಡ್ ಕಡೆ ನಮ್ಮ ಒಲವು ಹೆಚ್ಚು ಅದರ ಜೊತೆ ಸಮಯಕ್ಕೆ ಸರಿಯಾಗಿ ಆಹಾರ ಪದಾರ್ಥಗಳನ್ನು ಸೇವಿಸದ ಕಾರಣ  ಇವುಗಳು ಹಲವಾರು ರೋಗಗಳನ್ನು ತರುತ್ತವೆ. ಇತ್ತೀಚಿನ ದಿನಗಳಲ್ಲಿ ಯಾವುದೇ  ವಯಸ್ಸಿನ ಮಿತಿಯಿಲ್ಲದೆ ಎಲ್ಲರಿಗೂ ಸಕ್ಕರೆ ಕಾಯಿಲೆ ಬಿಪಿ ಅಂಥ ಕಾಯಿಲೆಗಳು ಸಾಮಾನ್ಯವಾಗಿದೆ.

ಎಲ್ಲರೂ ತಿಳಿಯರು ತಿಳಿಯ ಬೇಕಾದ ಮುಖ್ಯ ಸಂಗತಿ ಆರೋಗ್ಯವೇ ಭಾಗ್ಯ. ಆರೋಗ್ಯವಾಗಿದ್ದರೆ ಏನನ್ನಾದರೂ ಸಾಧಿಸಿ ಬಹುದು ಎಂಬುದನ್ನು ಎಲ್ಲರೂ ಅರಿಯಬೇಕು 
ಸರಳ ಆರೋಗ್ಯ ಸಲಹೆಗಳೇ ಈ ಕೆಳಗಿನಂತಿದೆ.

-ಈ ಎರಡನ್ನು ಆಗಾಗ ಪರೀಕ್ಷಿಸಿಕೊಳ್ಳಿ:
 ಒಮ್ಮೆ ಶುರು ಆದರೆ ಕೊನೆವರೆಗೂ ಇರುವ ಕಾಯಿಲೆಗಳು ಎಂದರೆ ಅದು ಬಿಪಿ ಮತ್ತು ಶುಗರ್. ಹಾಗಾಗಿ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ. ಬಿಡುವಿದ್ದಾಗ ಅಥವಾ ಅದಕ್ಕಾಗಿಯೇ ಸಮಯ ಮಾಡಿಕೊಂಡು ಬಿಪಿ, ಶುಗರ್ ಅನ್ನು ಆಗಾಗ ಪರೀಕ್ಷಿಸಿಕೊಳ್ಳಿ ಅದರ ಜೊತೆ ನಿಯಂತ್ರಣದ ಕಡೆ ಗಮನಕೊಡಿ 

-ಈ ನಾಲ್ಕನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ:
 ದಿನ ಬಳಕೆಯ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಹೆಚ್ಚಾಗಿ ಬಳಸುವುದನ್ನು ಕಡಿಮೆ ಮಾಡಿ. ಯಾವುದಾದರೂ ಅಗತ್ಯಕ್ಕಿಂತ ಹೆಚ್ಚಾದರೆ ಹಾಳು. ಹಾಗಾಗಿ ಎಷ್ಟು ಬೇಕೋ ಅಷ್ಟೇ ಬಳಸಿ. ಅದೆಲ್ಲದರ ಜೊತೆಗೆ ಡೈರಿ ಉತ್ಪನ್ನಗಳು, ಪಿಷ್ಠ ಪದಾರ್ಥಗಳು ತಿನ್ನುವುದನ್ನು ಕಡಿಮೆ ಮಾಡಿ.

ಈ ನಾಲ್ಕನ್ನು ಹೆಚ್ಚು ಬಳಸಿ:
 ಪ್ರತಿದಿನ ನಿಮ್ಮ ಊಟ ತಿಂಡಿಯಲ್ಲಿ ಅಗತ್ಯವಾಗಿ ಹಸಿರು ಸೊಪ್ಪು, ತರಕಾರಿಗಳು, ಬೀಜಗಳು, ಹಣ್ಣುಗಳು ಬಳಸಿ. ಇವು ನಿಮ್ಮ ಆರೋಗ್ಯಕ್ಕೆ ಮುಖ್ಯವಾಗಿದೆ.

-ಈ ಮೂರನ್ನು ಮರೆತು ಬಿಡಿ: 
ಜೀವನದಲ್ಲಿ ನೀವು ಆರೋಗ್ಯವಾಗಿರಬೇಕು ಎಂದಲ್ಲಿ ಮೊದಲು ನಿಮ್ಮ ವಯಸ್ಸಿನ ಬಗ್ಗೆ, ಕಳೆದು ಹೋದ ದಿನಗಳ ಬಗ್ಗೆ, ಮತ್ತು ಯಾರೊಂದಿಗಾದರೂ ದ್ವೇಷ ಕಟ್ಟಿಕೊಂಡಿದ್ದರೇ ಅವೆಲ್ಲವನ್ನು ಮರೆತು ಬಿಡಿ. ಇವೆಲ್ಲವೂ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ.

ಈ ನಾಲ್ಕನ್ನು ಹೆಚ್ಚು ಬಳಸಿ: 
ಪ್ರತಿದಿನ ನಿಮ್ಮ ಊಟ ತಿಂಡಿಯಲ್ಲಿ ಅಗತ್ಯವಾಗಿ ಹಸಿರು ಸೊಪ್ಪು, ತರಕಾರಿಗಳು, ಬೀಜಗಳು, ಹಣ್ಣುಗಳು ಬಳಸಿ. ಇವು ನಿಮ್ಮ ಆರೋಗ್ಯಕ್ಕೆ ಮುಖ್ಯವಾಗಿದೆ.

-ಈ ಮೂರನ್ನು ಮರೆತು ಬಿಡಿ :
 ಜೀವನದಲ್ಲಿ ನೀವು ಆರೋಗ್ಯವಾಗಿರಬೇಕು ಎಂದಲ್ಲಿ ಮೊದಲು ನಿಮ್ಮ ವಯಸ್ಸಿನ ಬಗ್ಗೆ, ಕಳೆದು ಹೋದ ದಿನಗಳ ಬಗ್ಗೆ, ಮತ್ತು ಯಾರೊಂದಿಗಾದರೂ ದ್ವೇಷ ಕಟ್ಟಿಕೊಂಡಿದ್ದರೇ ಅವೆಲ್ಲವನ್ನು ಮರೆತು ಬಿಡಿ. ಇವೆಲ್ಲವೂ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ.

ಈ ಮೂರನ್ನು ಹೊಂದಲು ಪ್ರಯತ್ನಿಸಿ: 
ಜೀವನದಲ್ಲಿ ಯಾವಾಗಲೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಧನಾತ್ಮಕ ಚಿಂತನೆ ಅತ್ಯಗತ್ಯ. ನಕಾರಾತ್ಮಕ ಚಿಂತನೆಗಳು ನಮ್ಮನ್ನು ಚಿಂತೆಗಳ ಕೂಪಕ್ಕೆ ತಳ್ಳಿ ಬಿಡುತ್ತದೆ ಇದರಿಂದ ಆಚೆ ಬರುವುದು ತುಂಬಾ ಕಷ್ಟ. ಹಾಗಾಗಿ ಆದಷ್ಟು ನಕಾರಾತ್ಮಕ ಚಿಂತೆ ಬಿಟ್ಟು ಸಕಾರಾತ್ಮಕ ಚಿಂತನೆಯನ್ನು ಮಾಡಿ. ಜೊತೆಗೆ ನಮ್ಮ ಒತ್ತಡ, ಚಿಂತೆ ಕಡಿಮೆ ಮಾಡಲು ಪ್ರೀತಿಸುವ ಕುಟುಂಬ, ನೈಜ ಮಿತ್ರರು ಇದ್ದಲ್ಲಿ ಸಂತೋಷವನ್ನು ಹುಡುಕಿಕೊಂಡು ಹೋಗಬೇಕೆಂದಿಲ್ಲ. ಖುಷಿ ಇದ್ದಲ್ಲಿ ಆರೋಗ್ಯವು ಜೊತೆಯಾಗುತ್ತದೆ.

ಆರೋಗ್ಯವಾಗಿರಲು ಮುಖ್ಯವಾಗಿ ಹೀಗೆ ಮಾಡಿ : 
ವಾರದಲ್ಲಿ ಒಂದು ದಿನವಾದರೂ ಉಪವಾಸ ಮಾಡಿ. ಇದರಿಂದ ದೇಹಕ್ಕೆ ಒಳ್ಳೆಯದು. ಆರೋಗ್ಯವಾಗಿರಲು ಉತ್ತಮ ಔಷಧವೆಂದರೆ ನಗು. ಇದರಿಂದ ನಿಮ್ಮ ಆತಂಕ ಮಾಯವಾಗುತ್ತದೆ ಜೊತೆಗೆ ಸಹಜವಾಗಿ ಆರೋಗ್ಯ ಸುಧಾರಿಸುತ್ತದೆ. ಇವೆಲ್ಲದರೊಂದಿಗೆ ದಿನನಿತ್ಯ ವ್ಯಾಯಾಮ/ಯೋಗ ಮಾಡಿ. ಇವು ನಿಮಗೆ ನಿರಾಳತೆ ನೀಡಿ. ದಿನ ಪೂರ್ತಿ ನಿಮ್ಮನ್ನು ಲವಲವಿಕೆಯಿಂದಿರಲು ಸಹಾಯ ಮಾಡುತ್ತದೆ. ಇದೆಲ್ಲದರ ಜೊತೆಗೆ ಆದಷ್ಟು ತೂಕ ಕಡಿಮೆ ಮಾಡಿಕೊಳ್ಳಿ. ಇದರಿಂದ ಫಿಟ್ ಆಗಿ ಇರುತ್ತೀರಿ. ಆರೋಗ್ಯವು ಜೊತೆಯಾಗುತ್ತದೆ.

- ಈ ಎರಡು ವಿಷಯಗಳಿಗೆ ಕಾಯಬೇಡಿ : 
ಮೊದಲನೆಯದು ರಾತ್ರಿ ಸಮಯದಲ್ಲಿ ನಿದ್ದೆ ಮಾಡಲು ನಿದ್ದೆ ಬರುವ ವರೆಗೆ ಕಾಯಬೇಡಿ. ಇದರಿಂದ ನಿಮ್ಮ ನಿದ್ದೆಗೆ ಅಡತಡೆ ಆಗುವುದರ ಜೊತೆಗೆ 8 ತಾಸು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ನಿದ್ರೆ ಸರಿಯಾಗಿ ಆಗದಿದ್ದಲ್ಲಿ ಆರೋಗ್ಯ ಕೆಡುತ್ತದೆ. ಕೆಲಸ ಮಾಡಿ ಬಂದಾಗ ಅಥವಾ ಸಮಯ ಸಿಕ್ಕಾಗ ವಿಶ್ರಾಂತಿ ತೆಗೆದುಕೊಳ್ಳಲು ಮರೆಯದಿರಿ. ಸುಸ್ತಾಗುವವರೆಗೆ ಕಾಯಬೇಡಿ. ಆಗ ನಿಮ್ಮ ದೇಹಕ್ಕೂ ಮತ್ತು ಮನಸ್ಸಿಗೂ ಆನಂದ ದೊರೆಯುತ್ತದೆ. 
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಕಾಪಾಡಿಕೊಳ್ಳುವುದು ಅಗತ್ಯ

Ads on article

Advertise in articles 1

advertising articles 2

Advertise under the article