-->

ಶುಕ್ರವಾರದ ದಿನ ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ದಾರಿದ್ರ ಬರುವುದು ಖಂಡಿತ...!

ಶುಕ್ರವಾರದ ದಿನ ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ದಾರಿದ್ರ ಬರುವುದು ಖಂಡಿತ...!

ಹಾಸಿಗೆಯ ಮೇಲೆ ಊಟ ಮಾಡುವುದು

ಹಾಸಿಗೆಯ ಮೇಲೆ ಕುಳಿತು ಊಟ ಮಾಡುವ ಮನೆಯ ಜನರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಎಂದಿಗೂ ಸಿಗುವುದಿಲ್ಲ. ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಜೀವನದಲ್ಲಿ ಬಡತನ ಬರುತ್ತದೆ. ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದರಿಂದ ನೀವು ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುವುದು ಮಾತ್ರವಲ್ಲ, ತಾಯಿ ಅನ್ನಪೂರ್ಣೇಶ್ವರಿಯ ಕೋಪಕ್ಕೂ ಗುರಿಯಾಗಬೇಕಾಗುತ್ತದೆ.

ರಾತ್ರಿ ಮನೆಯನ್ನು ಗುಡಿಸುವುದು

ರಾತ್ರಿ ಮನೆಯನ್ನು ಗುಡಿಸುವಂತಹ ಮನೆಗಳಿಗೆ ಲಕ್ಷ್ಮಿ ದೇವಿಯು ಬರುವುದಿಲ್ಲ. ಧಾರ್ಮಿಕ ನಂಬಿಕೆಗಳ ಪ್ರಕಾರ, ರಾತ್ರಿ ಸಮಯದಲ್ಲಿ ಮನೆಯನ್ನು ಗುಡಿಸುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಿಸಿಕೊಳ್ಳುತ್ತಾಳೆ. ರಾತ್ರಿಯಲ್ಲಿ ಮನೆಯನ್ನು ಗುಡಿಸುವುದು ಯಾವಾಗಲೂ ಮನೆಯಲ್ಲಿ ಹಣದ ಕೊರತೆ ಎದುರಾಗಲು ಕಾರಣವಾಗುತ್ತದೆ. ಒಂದು ವೇಳೆ ನೀವು ರಾತ್ರಿ ಸಮಯದಲ್ಲಿ ಮನೆಯನ್ನು ಗುಡಿಸಿದರೂ ಕಸವನ್ನು ಹೊರಹಾಕಬೇಡಿ. ಮನೆಯ ಒಂದು ಮೂಲೆಯಲ್ಲಿಟ್ಟು ಮುಂಜಾನೆ ಹೊರಹಾಕಿ.


ಪತಿ ಪತ್ನಿಯ ನಡುವೆ ಮನಸ್ಥಾಪ
ಪತಿ-ಪತ್ನಿಯರ ನಡುವೆ ಸದಾ ಜಗಳ ನಡೆಯುತ್ತಿದ್ದು, ಮನೆಯಲ್ಲಿ ಸದಾ ಅಶಾಂತಿಯ ವಾತಾವರಣ ಇರುವ ಮನೆಗೆ ತಾಯಿ ಲಕ್ಷ್ಮಿ ಬರುವುದಿಲ್ಲ. ಪತಿ - ಪತ್ನಿ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತು ಬಾಳುವ ಮನೆಗಳಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ. 

ರಾತ್ರಿ ಬಟ್ಟೆ ಒಗೆಯುವುದು
ರಾತ್ರಿ ಬಟ್ಟೆ ಒಗೆಯುವ ಮನೆಗಳ ಬಗ್ಗೆ ತಾಯಿ ಲಕ್ಷ್ಮಿ ಅತೃಪ್ತಳಾಗುತ್ತಾಳೆ. ಅಂತಹ ಮನೆಗಳನ್ನು ಲಕ್ಷ್ಮಿ ದೇವಿಯು ಪ್ರವೇಶಿಸುವುದಿಲ್ಲ. ರಾತ್ರಿ ಸಮಯದಲ್ಲಿ ಬಟ್ಟೆಯನ್ನು ಒಗೆಯುವುದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳನ್ನು ಬಲಪಡಿಸುತ್ತದೆ. 

Ads on article

Advertise in articles 1

advertising articles 2

Advertise under the article