-->

ಇಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶ

ಇಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶ



ಮಂಗಳೂರು:  ಅಖಿಲ ಭಾರತ ಕಾಂಗ್ರೆಸ್ ಪಕ್ಷ  ಕರಾವಳಿಯಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶ ಆಯೋಜಿಸುವ ಮೂಲಕ ರಾಜ್ಯದಲ್ಲಿ ಚುನಾವಣಾ ತಯಾರಿ ಆರಂಭಿಸಿದೆ.


ಡಿ.28ರಂದು ನಾಗುರದಲ್ಲಿ ‘ಕಾಂಗ್ರೆಸ್ ಸಂಸ್ಥಾ ಪನಾ' ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾತನಾಡಿ, ನಾಗ್ಪುರ ಆರೆಸ್ಸೆಸ್‌ನ ಕೇಂದ್ರ ಸ್ಥಾನ ಎಂದು ಬಿಂಬಿತವಾಗಿದೆ. ಆದರೆ ನಾಗುರ 1956ರಲ್ಲಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ದೀಕ್ಷಾ ಭೂಮಿ. ಮಹಾತ್ಮ ಗಾಂಧೀಜಿಗೂ ಈ ನಾಡಿಗೂ ಹತ್ತಿರದ ಸಂಬಂಧವಿದೆ. ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಕೇಂದ್ರ ಸ್ಥಾನವಾಗಿ ಆಯ್ದುಕೊಂಡು ಸೇವಾಶ್ರಮ ಸ್ಥಾಪಿಸಿದ ವಾರ್ಧಾ ಇರೋದು ಈ ನಾಗುರ ಬಳಿ. ಬಿಜೆಪಿಯನ್ನು ರಾಜಕೀಯವಾಗಿ ಸೋಲಿಸಬೇಕಾದರೆ ಮೊದಲು ಆರೆಸ್ಸೆಸ್, ಅದರ ಸಿದ್ಧಾಂತವನ್ನು ಸೋಲಿಸಬೇಕು. ಆರೆಸ್ಸೆಸ್ ನಾಗ್ಪುರದಲ್ಲಿ ಹುಟ್ಟಿಈ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ಆದರೆ ಇದಕ್ಕೆ ಕಾಂಗ್ರೆಸ್ ಅವಕಾಶ ನೀಡಲ್ಲ, 'ಹಮ್ ತಯಾರ್ ಹೈ' ಎಂದು ಹೇಳಿ ಬಿಜೆಪಿಗೆ ಲೋಕ ಸಮರದ ಸಂದೇಶ ಸಾರಿದ್ದರು.


ನಾಗುರದಲ್ಲಿ ನಡೆದ ಸಮಾವೇಶದಿಂದಾಗಿ ಲೋಕ ಸಭೆ ಸಮರಕ್ಕೆ ಕಾಂಗ್ರೆಸ್‌ಗೆ ಕಿಕ್ ಸ್ಟಾರ್ಟ್ ಸಿಕ್ಕಂತಾಗಿದೆ. ಹೊಸದಿಲ್ಲಿ ಕಚೇರಿಯಲ್ಲಿ ಧ್ವಜಾರೋಹಣ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಗ್ಪುರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ

ಖರ್ಗೆ ಅವರು ಕಣ್ಣು ಇಟ್ಟದ್ದೇ ಕರ್ನಾಟಕದ ಕರಾವಳಿ ಜಿಲ್ಲೆಯತ್ತ.


 ಎಐಸಿಸಿ ಅಧ್ಯಕ್ಷ ರಾಗಿ ಖರ್ಗೆ ಆಯ್ಕೆಯಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ಎಲ್ಲ ರಾಜ್ಯಗಳಲ್ಲೂ ಒಂದೊಂದು ಕಾಂಗ್ರೆಸ್ ಮಹಾಸಮಾವೇಶ ಆಯೋಜಿಸುತ್ತಾ ಬಂದಿದ್ದಾರೆ.

ಕರ್ನಾಟಕದ ಸಮಾವೇಶವನ್ನು ಕರಾವಳಿಯಿಂದ ಆರಂಭಿಸಲು ನಿರ್ಧರಿಸಲಾಗಿದೆ. ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ದಕ ಮತ್ತು ಉಡುಪಿ ಜಿಲ್ಲೆಯಿಂದ ಇಬ್ಬರು ಮುಖ್ಯಮಂತ್ರಿಗಳು, 6 ಮಂದಿ ಕೇಂದ್ರ ಸಚಿವರು ಸೇರಿದಂತೆ ರಾಜ್ಯ, ರಾಷ್ಟ್ರಮಟ್ಟದ ನಾಯಕರನ್ನು ಕೊಟ್ಟ ಜಿಲ್ಲೆಯಿದು.


ರಾಜಕೀಯ ಇತಿಹಾಸದಲ್ಲಿ ದಕ ಜಿಲ್ಲೆಯಲ್ಲಿ ಅತೀ

ಹೆಚ್ಚು ಸೀಟು ಗೆದ್ದಾಗ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ರಾಷ್ಟ್ರ, ರಾಜ್ಯಮಟ್ಟದ ನಾಯಕರನ್ನು ನೀಡಿ ಸಚಿವ ಸ್ಥಾನಗಳನ್ನು ಪಡೆದ ಹಿರಿಮೆ ಈ ಜಿಲ್ಲೆಗಿದೆ. ಆದರೆ ಈಗ ಸಂಘ-ಪರಿವಾರದ ಸಂಘಟನಾ ಬಲ ದಿಂದ ಕರಾವಳಿ ಜಿಲ್ಲೆಗಳು ಕೇಸರಿ ಪಾಲಾಗಿದ್ದು, ಈ ವ್ಯಾಪ್ತಿಯನ್ನು ಮತ್ತೆ ತಮ್ಮ ವಶಕ್ಕೆ ಪಡೆಯುವ ಟಾರ್ಗೆಟ್ ಮಲ್ಲಿಕಾರ್ಜುನ ಖರ್ಗೆ ಅವರದ್ದಾಗಿದೆ. ಇದಕ್ಕಾಗಿಯೇ ಕರಾವಳಿಯಲ್ಲೇ ಸಮಾವೇಶ ಆಯೋಜಿಸಲಾಗಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article