ಮೂಡುಬಿದಿರೆ: ನಾಪತ್ತೆಯಾದ ವಿದ್ಯಾರ್ಥಿನಿ ಕೇರಳದಲ್ಲಿ ಪ್ರಿಯಕರನನ್ನು ವಿವಾಹವಾಗಿ ಪತ್ತೆ


ಮೂಡುಬಿದಿರೆ: ಮೂಡುಬಿದಿರೆಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿಪಿಟಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯು ನಾಪತ್ತೆಯಾಗಿದ್ದು, ಇದೀಗ ಆಕೆ ತನ್ನ ಪ್ರಿಯಕರನನ್ನು ಕೇರಳದಲ್ಲಿ ವಿವಾಹವಾಗಿ ಪತ್ತೆಯಾಗಿದ್ದಾಳೆ.

ಬೈಂದೂರು ತಾಲೂಕಿನ ಕೊಲ್ಲೂರು ನಿವಾಸಿ 19ವರ್ಷದ ಆದಿರಾ ಎಂಬಾಕೆ ಮೂಡುಬಿದಿರೆ ಕಾಲೇಜಿನ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಬಿಪಿಪಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರ ಬೆಳಗ್ಗೆ ತನ್ನ ಸಹಪಾಠಿಗಳೊಂದಿಗೆ ಕಾಲೇಜ್ ಬಸ್ ನಲ್ಲಿ ಬಂದು ಮೂಡುಬಿದಿರೆಯ ಕನ್ನಡ ಭವನದಲ್ಲಿ ಇಳಿದಿದ್ದಾಳೆ. ಆ ಬಳಿಕ ಅಲ್ಲಿಂದ ಕಾಲೇಜಿಗೆ ಹೋಗದೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಪೋಷಕರು ಮೂಡುಬಿದಿರೆ ಠಾಣೆಯಲ್ಲಿ ದೂರು ನೀಡಿದ್ದರು.


ಇದೀಗ ಆಕೆ ಕೇರಳದಲ್ಲಿ ತನ್ನ ಪ್ರಿಯಕರನನ್ನು ವಿವಾಹವಾಗಿ ಪತ್ತೆಯಾಗಿದ್ದಾಳೆ. ಆಕೆ ಬೈಂದೂರಿನ ನಿವಾಸಿ ಯುವಕನನ್ನು ಪ್ರೀತಿಸುತ್ತಿದ್ದಳು.