-->
1000938341
ರಾಜ್ಯ ಸಭಾ ಚುನಾವಣೆ ಫಲಿತಾಂಶ ಪ್ರಕಟ - ಕಾಂಗ್ರೆಸ್ ಗೆ 3, ಬಿಜೆಪಿಗೆ 1 ಸ್ಥಾನ

ರಾಜ್ಯ ಸಭಾ ಚುನಾವಣೆ ಫಲಿತಾಂಶ ಪ್ರಕಟ - ಕಾಂಗ್ರೆಸ್ ಗೆ 3, ಬಿಜೆಪಿಗೆ 1 ಸ್ಥಾನ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿಂದು  ಬೆಳಗ್ಗೆಯಿಂದ ತೀವ್ರ ಸಂಚಲನ ಸೃಷ್ಟಿಸಿದ್ದ ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅಜಯ್ ಮಕೇನ್ ಸಯ್ಯದ್ ನಾಸೀರ್ ಹುಸೇನ್  ಮತ್ತು ಜಿಸಿ ಚಂದ್ರಶೇಖರ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇತ್ತ ಬಿಜೆಪಿಯ ನಾರಾಯಣ ಬಾಂಡಗೆ ಗೆಲುವನ್ನು ಕಂಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ 5ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಪೇಂದ್ರ ರೆಡ್ಡಿ ) 
ಸೋತಿದ್ದಾರೆ. 


ಮತದಾನ ಪ್ರಕ್ರಿಯೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲಿನ ಸುಳಿವುನ್ನು ನೀಡಿದ್ದರು. ಅಂತಿಮವಾಗಿ ಕಾಂಗ್ರೆಸ್ನಿಂದ ಮೂವರು ಮತ್ತು ಬಿಜೆಪಿಯ ಒಬ್ಬರು ರಾಜ್ಯಸಭೆಗೆ ತೆರಳಲಿದ್ದಾರೆ.

ಮತದಾನದ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು 223 ಮತದಾರರಲ್ಲಿ 222 ಮತದಾರರು ತಮ್ಮ ಮತವನ್ನು ಚಲಾವಣೆ ಮಾಡಿದ್ದಾರೆ. (ಶೇ. 99.5% ಮತದಾನವಾಗಿದೆ)
ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಹೀಗಿದೆ

ಅಭ್ಯರ್ಥಿಗಳ ಹೆಸರು ಪಕ್ಷ ಪಡೆದ ಮತಗಳು
ಅಜಯ್ ಮಕೇನ್ - ಕಾಂಗ್ರೆಸ್  - 47
ಸಯ್ಯದ್ ನಾಸೀರ್ ಹುಸೇನ್ - ಕಾಂಗ್ರೆಸ್- 47
ಜಿಸಿ ಚಂದ್ರಶೇಖರ್ - ಕಾಂಗ್ರೆಸ್ - 45
ನಾರಾಯಣ ಬಾಂಡೆಗೆ - ಬಿಜೆಪಿ - 47
ಕುಪೇಂದ್ರ ರೆಡ್ಡಿ ಜೆಡಿಎಸ್ - 36
ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಗೈರು

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಶಾಕ್ ನೀಡಿದರು. ಶಾಸಕರ ಭವನದಲ್ಲಿಯೇ ಇದ್ರೂ ಶಾಸಕರು ಮತದಾನ ಮಾಡದೇ ಗೈರಾಗಿದ್ದರು.

56 ಸ್ಥಾನಗಳಿಗೆ ನಡೆದ ಚುನಾವಣೆ : 
15 ರಾಜ್ಯಗಳಿಂದ ಖಾಲಿ ಇರುವ 56 ಸ್ಥಾನಗಳಿಗೆ ಇಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ 
ನಡೆದಿದೆ. ಉತ್ತರ ಪ್ರದೇಶದಿಂದ 10 ಸ್ಥಾನಗಳು, ಮಹಾರಾಷ್ಟ್ರ ಮತ್ತು ಬಿಹಾರದಿಂದ  ತಲಾ 6 ಸ್ಥಾನಗಳು, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಿಂದ ತಲಾ 5 ಸ್ಥಾನಗಳಿಗೆ ಚುನಾವಣೆ ನಡೆದಿದೆ.

ಉಳಿದಂತೆ ಗುಜರಾತ್ ಮತ್ತು ಕರ್ನಾಟಕದಿಂದ ತಲಾ 4 ಸ್ಥಾನಗಳು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಒಡಿಶಾದಿಂದ ತಲಾ 3 ಸ್ಥಾನಗಳು ಹಾಗೇ ಉತ್ತರಾಖಂಡ, ಛತ್ತೀಸ್‌ಗಢ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆದಿದೆ.

ಮತದಾನ ಪ್ರಕ್ರಿಯೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲಿನ ಸುಳಿವುನ್ನು ನೀಡಿದ್ದರು. ಅಂತಿಮವಾಗಿ ಕಾಂಗ್ರೆಸ್ನಿಂದ ಮೂವರು ಮತ್ತು ಬಿಜೆಪಿಯ ಒಬ್ಬರು ರಾಜ್ಯಸಭೆಗೆ ತೆರಳಲಿದ್ದಾರೆ.ಮತದಾನದ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು 223 ಮತದಾರರಲ್ಲಿ 222 ಮತದಾರರು ತಮ್ಮ ಮತವನ್ನು ಚಲಾವಣೆ ಮಾಡಿದ್ದಾರೆ. (ಶೇ. 99.5% ಮತದಾನವಾಗಿದೆ)

ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಗೈರು
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಶಾಕ್ ನೀಡಿದರು. ಶಾಸಕರ ಭವನದಲ್ಲಿಯೇ ಇದ್ರೂ ಶಾಸಕರು ಮತದಾನ ಮಾಡದೇ ಗೈರಾಗಿದ್ದರು.

Ads on article

Advertise in articles 1

advertising articles 2

Advertise under the article