-->

27ನೇ ವಯಸ್ಸಿಗೇ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಪಟ್ಟ - ಈತನ ಆಸ್ತಿ ಮೊತ್ತದ ಕೇಳಿದ್ರೆ ದಂಗಾಗೋದು ಖಚಿತ

27ನೇ ವಯಸ್ಸಿಗೇ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಪಟ್ಟ - ಈತನ ಆಸ್ತಿ ಮೊತ್ತದ ಕೇಳಿದ್ರೆ ದಂಗಾಗೋದು ಖಚಿತ

ನವದೆಹಲಿ: ದೇಶದಲ್ಲಿ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ನೂರಾರು ಬಿಲಿಯನೇರ್‌ಗಳಿದ್ದಾರೆ. ಆದರೆ ದೇಶದ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿರುವಂತೆ ಹೊಸಹೊಸ ಮುಖಗಳು ಬಿಲಿಯನೇರ್ ಪಟ್ಟಿಗೆ ಸೇರಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಪರ್ಲ್ ಕಪೂರ್ ಎಂಬವರು ಸೇರಿದ್ದಾರೆ. ಪರ್ಲ್ ಕಪೂರ್‌ ಗೆ ಕೇವಲ 27ವರ್ಷ ವಯಸ್ಸು. ಉದ್ಯಮದ ಇತಿಹಾಸದಲ್ಲೇ ಪರ್ಲ್ ಕಪೂರ್ ಅತಿ ಕಿರಿಯ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪರ್ಲ್ ಕಪೂ‌ರ್ ಈ ಅದ್ಭುತ ಯಶಸ್ಸು Zyber 365 ಹೆಸರಿನ ಸ್ಟಾರ್ಟ್‌ಅಪ್ ಕಂಪೆನಿಯ ಅತ್ಯಂತ ವೇಗದ ಬೆಳವಣಿಗೆಯೇ ಕಾರಣ. 2023ರ ಮೇಯಲ್ಲಿ  Zyber 365 ಸ್ಥಾಪನೆಯಾಗಿತ್ತು. ಇದೊಂದು Web3 ಮತ್ತು Al-ಆಧಾರಿತ ಆಪರೇಷನ್ ಸಿಸ್ಟಮ್ ಸ್ಟಾರ್ಟ್‌ಅಪ್‌ ಆಗಿದೆ. ಇದು ಚಿಲ್ಲರೆ ವಲಯವನ್ನು ಅಡ್ಡಿಪಡಿಸಿದ್ದು, ಮಾತ್ರವಲ್ಲದೆ ಮೂರೇ ತಿಂಗಳಲ್ಲಿ ಯೂನಿಕಾರ್ನ್ ಸ್ಟೇಟಸ್ ಪಡೆದಿದೆ. ಸ್ಟಾರ್ಟ್‌ಅಪ್ ಕಂಪೆನಿ 1 ಶತಕೋಟಿ ಡಾಲರ್‌ಗೂ ಅಧಿಕ ಮೌಲ್ಯವನ್ನು ಹೊಂದಿದ್ದರೆ ಅದನ್ನು ಯೂನಿಕಾರ್ನ್ ಎಂದು ಕರೆಯಲಾಗುತ್ತದೆ.

ಗುಜರಾತ್ ನ ಅಹಮದಾಬಾದ್‌ನಲ್ಲಿ ಕಾರ್ಯಾಚರಣೆ ಮಾಡುವ ಈ ಕಂಪೆನಿ ಲಂಡನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 1.2 ಶತಕೋಟಿ ಡಾಲರ್ (ಅಂದಾಜು 9,840 ಕೋಟಿ ರೂ.) ಮೌಲ್ಯವನ್ನು ಹೊಂದಿದ್ದು, ಭಾರತ ಮತ್ತು ಏಷ್ಯಾದ ಅತ್ಯಂತ ವೇಗದ ಯುನಿಕಾರ್ನ್ ಎಂಬ ಪ್ರಶಂಸೆಗೆ ಒಳಗಾಗಿದೆ. Zyber 365ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಪರ್ಲ್ ಕಪೂ‌ರ್, ಕಂಪನಿಯಲ್ಲಿ 90% ರಷ್ಟು ಷೇರುಗಳೊಂದಿಗೆ 1.1 ಶತಕೋಟಿ ಡಾಲರ್ (9,129 ಕೋಟಿ ರೂ.) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಲಂಡನ್‌ನ ಕ್ಲೀನ್ ಮೇರಿ ವಿಶ್ವವಿದ್ಯಾನಿಲಯದಿಂದ ಎಂಎಸ್‌ಸಿ ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್ (ಸಿಎಫ್‌ಎ ಪಾಥ್‌ವೇ) ಪದವೀಧರರಾಗಿರುವ ಕಪೂರ್, ವೆಬ್3 ತಂತ್ರಜ್ಞಾನದ ಕ್ಷೇತ್ರದಲ್ಲಿ ನಾವೀನ್ಯಕಾರರಾಗಿ ಗುರುತಿಸಿಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article