-->
1000938341
ಪತ್ನಿಯ ಫೋನ್ ಕದ್ದಾಲಿಕೆ ಮಾಡಿ 16.58 ಕೋಟಿ ರೂ ಗಳಿಕೆ - ಪತಿಗೆ ವಿಚ್ಛೇದನ

ಪತ್ನಿಯ ಫೋನ್ ಕದ್ದಾಲಿಕೆ ಮಾಡಿ 16.58 ಕೋಟಿ ರೂ ಗಳಿಕೆ - ಪತಿಗೆ ವಿಚ್ಛೇದನ



ವಾಷಿಂಗ್ಟನ್: ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದ ಪತ್ನಿಯ ಫೋನ್‌ ಕರೆಗಳನ್ನು ಕದ್ದಾಲಿಸಿ ಆಕೆ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯ ದತ್ತಾಂಶಗಳನ್ನು ತಿಳಿದು, ಅವುಗಳ ಆಧಾರದಲ್ಲಿ ಅಕ್ರಮವಾಗಿ ವ್ಯವಹಾರ ನಡೆಸಿ 16.58 ಕೋಟಿ ರೂ. ಲಾಭ ಗಳಿಸಿದ್ದ ಪತಿಗೆ ಪತ್ನಿ ವಿಚ್ಛೇದನ ನೀಡಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಟೆಕ್ಸಾಸ್‌ ನಿವಾಸಿ ಟೈಲರ್‌ ಲೌಡನ್‌ ಅವರ ಪತ್ನಿ ಬ್ರಿಟಿಷ್‌ ಪೆಟ್ರೋಲಿಯಂ (ಬಿಪಿ) ಸಂಸ್ಥೆಯಲ್ಲಿ ವಿಲೀನ ಮತ್ತು ಸ್ವಾಧೀನ ವಿಭಾಗದಲ್ಲಿ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಪಿ ಸಂಸ್ಥೆಯು ಅಮೆರಿಕ ಐಎನ್‌ಸಿಯ ಟ್ರಾವೆಲ್ಸ್‌ ಸಂಸ್ಥೆಗಳನ್ನು ಖರೀದಿಸಲು ಯೋಜಿಸಿದ್ದು, ಅದರ ಮೇಲ್ವಿಚಾರಣೆಯನ್ನೂ ಇವರು ನೋಡಿಕೊಳ್ಳುತ್ತಿದ್ದರು. ಆಕೆ ಮನೆಯಿಂದ ಕಾರ್ಯ ನಿರ್ವಹಿಸುವಾಗ ಟೈಲರ್‌ ಪತ್ನಿಯ ಫೋನ್‌ ಕರೆಗಳನ್ನು ಕದ್ದಾಲಿಸಿದ್ದರು.

 ಈ ಬಗ್ಗೆ ತಿಳಿದುಕೊಂಡು, ಟ್ರಾವೆಲ್‌ ಸಂಸ್ಥೆಗಳ ಷೇರನ್ನು ಖರೀದಿಸಿದ್ದಾರೆ. ಈ ಮೂಲಕ 16.58 ಕೋಟಿ ರೂ. ಗಳ ಲಾಭ ಪಡೆದಿದ್ದಾರೆ. ಇತ್ತ ಸಂಸ್ಥೆಯು ಮಾಹಿತಿ ಸೋರಿಕೆಯಾಗಿದೆ ಎಂದು ಟೈಲರ್‌ ಅವರ ಪತ್ನಿಯನ್ನು ವಜಾಗೊಳಿಸಿದೆ.

Ads on article

Advertise in articles 1

advertising articles 2

Advertise under the article