-->
1000938341
ಮಂಗಳೂರು: ಮೇಲಾಧಿಕಾರಿಗಳೊಂದಿಗೆ ಉಡಾಫೆ, ಮರಳುಗಾರಿಕೆಯೊಂದಿಗೆ ಶಾಮೀಲು ಆರೋಪ: ಇನ್‌ಸ್ಪೆಕ್ಟರ್ ಅಮಾನತು

ಮಂಗಳೂರು: ಮೇಲಾಧಿಕಾರಿಗಳೊಂದಿಗೆ ಉಡಾಫೆ, ಮರಳುಗಾರಿಕೆಯೊಂದಿಗೆ ಶಾಮೀಲು ಆರೋಪ: ಇನ್‌ಸ್ಪೆಕ್ಟರ್ ಅಮಾನತು


ಮಂಗಳೂರು: ಕರ್ತವ್ಯ ಲೋಪ, ಹಿರಿಯ ಅಧಿಕಾರಿಗಳೊಂದಿಗೆ ಉಡಾಫೆಯ ವರ್ತನೆ, ಮರಳುಗಾರಿಕೆಯೊಂದಿಗೆ ಶಾಮೀಲು ಆರೋಪದ ಮೇಲೆ ಕಂಕನಾಡಿ ನಗರ ಠಾಣಾ ಇನ್‌ಸ್ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನ ಜಪ್ಪಿನ‌ಮೊಗರು ಬಳಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಲು ಎಸಿಪಿ ಧನ್ಯಾ ನಾಯಕ್ ಇನ್‌ಸ್ಪೆಕ್ಟರ್ ಭಜಂತ್ರಿಯವರಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಅವರು ಯಾವುದೇ ಕ್ರಮ ಜರಗಿಸದೆ ಮೇಲಾಧಿಕಾರಿಗಳ ಸೂಚನೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಎಸಿಪಿ ಕಮಿಷನರ್‌ಗೆ ದೂರು ಸಲ್ಲಿಸಿದ್ದಾರೆ.

ಅಲ್ಲದೆ ತಮ್ಮ ಅಪಾರ್ಟ್‌ಮೆಂಟ್‌ ಫ್ಲ್ಯಾಟ್ ನವರೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪವೂ ಭಜಂತ್ರಿ ಮೇಲಿದೆ. ಮರಳು ಮಾಫಿಯಾದೊಂದಿಗೆ ಶಾಮೀಲು, ಹಿರಿಯ ಅಧಿಕಾರಿಗಳ ಅದೇಶ ನಿರ್ಲಕ್ಷ್ಯ, ದೂರುದಾರರ ನಿರ್ಲಕ್ಷ್ಯ, ಅಪಾರ್ಟ್‌ಮೆಂಟ್‌ನ ಸಹವರ್ತಿಗಳು ಜೊತೆ ಅಗೌರವದ ವರ್ತನೆಯ ಬಗ್ಗೆ ಖುದ್ದು ಎಸಿಪಿಯೇ ಕಮಿಷರ್‌ಗೆ ದೂರು ಸಲ್ಲಿಸಿದ್ದರು. ಈ ಕುರಿತಂತೆ ಪೊಲೀಸ್ ಕಮಿಷನರ್ ವಿವರಣೆ ಕೇಳಿದಾಗ ಅವರ ಜೊತೆಯೂ ಉಡಾಫೆಯಿಂದ ವರ್ತಿಸಿದ್ದಾರೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಮಿಷನರ್ ಅನುಪಮ್ ಅಗ್ರವಾಲ್ ಭಜಂತ್ರಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

Ads on article

Advertise in articles 1

advertising articles 2

Advertise under the article