ಬೆಳ್ತಂಗಡಿ: ವಿವಾಹಿತೆ ನೇಣಿಗೆ ಶರಣು

ಬೆಳ್ತಂಗಡಿ: ವಿವಾಹಿತೆಯೋರ್ವರು ನೇಣಿಗೆ ಶರಣಾಗಿರುವ ಘಟನೆ ಬೆಳ್ತಂಗಡಿಯ ಅಳದಂಗಡಿ ಸಮೀಪದ ಕುಬಲಾಜೆ ಎಂಬಲ್ಲಿ ನಡೆದಿದೆ.

ಅಳದಂಗಡಿ ಸಮೀಪದ ಕುಬಲಾಜೆ ಮನೆ ನಿವಾಸಿ ಉದ್ಯಮಿ ಸುನಿಲ್ ಎಂಬವರ ಪತ್ನಿ ಕಾವ್ಯಾ(32) ಆತ್ಮಹತ್ಯೆ ಮಾಡಿಕೊಂಡವರು‌.

ಗುರುವಾರ ಮಧ್ಯಾಹ್ನ ಕಾವ್ಯಾ ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತರಿಗೆ ಪತಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.