-->
1000938341
ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತ- ಸಿಟ್ಟಿಗೆದ್ದು ಪತಿಯ ಮರ್ಮಾಂಗವನ್ನೇ ಕಚ್ಚಿ ಗಾಯಗೊಳಿಸಿದ ಪತ್ನಿ

ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತ- ಸಿಟ್ಟಿಗೆದ್ದು ಪತಿಯ ಮರ್ಮಾಂಗವನ್ನೇ ಕಚ್ಚಿ ಗಾಯಗೊಳಿಸಿದ ಪತ್ನಿ

ಲಕ್ನೋ: ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ಬಲವಂತ ಪಡಿಸಿರುವ ಸಿಟ್ಟಿನಲ್ಲಿ ಪತ್ನಿಯೊಬ್ಬಳು ಪತಿಯ ಶಿಶ್ನವನ್ನೇ ಕಚ್ಚಿ ಗಾಯಗೊಳಿಸಿದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಪತ್ನಿ ಕಚ್ಚಿ ಗಾಯಗೊಳಿಸಿದ್ದರಿಂದ ತೀವ್ರ ರಕ್ತಸ್ರಾವಗೊಂಡ 34 ವರ್ಷದ ರಾಮು ನಿಶಾದ್‌ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಜನವರಿ 28ರಂದು ಈ ಘಟನೆ ನಡೆದಿದೆ. ರಾಮು ನಿಶಾದ್ ತನ್ನ ಪತ್ನಿಯನ್ನು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಇದಕ್ಕೆ ಪತ್ನಿ ಒಪ್ಪಲಿಲ್ಲ. ಆದ್ದರಿಂದ ಇಬ್ಬರ ನಡುವೆ ಜಗಳ ಆಗಿತ್ತು. ಈ ಸಿಟ್ಟಿನಲ್ಲಿದ್ದ ಪತ್ನಿಯು ರಾಮು ನಿಶಾದ್ ನ ಖಾಸಗಿ ಅಂಗವನ್ನು ಕಚ್ಚಿದ್ದಾಳೆ. ಪರಿಣಾಮ ಆತನ ಶಿಶ್ನದಿಂದ ತೀವ್ರ ರಕ್ತಸ್ರಾವವಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಪತಿ ಬೇಡಿಕೆ ಇಟ್ಟಿದ್ದಕ್ಕೆ ಬೇಸರಗೊಂಡು ಹೀಗೆ ಮಾಡಿರುವುದಾಗಿ ಪತ್ನಿ ಪೊಲೀಸರಿಗೆ ತಿಳಿಸಿದ್ದಾಳೆ. ಮಹಿಳೆ ವಿರುದ್ಧ ಸೆಕ್ಷನ್ 326 ರ ಅಡಿಯಲ್ಲಿ ಉದ್ದೇಶಪೂರ್ವಕ ತೀವ್ರ ಗಾಯವನ್ನು ಉಂಟುಮಾಡಿದ ಮತ್ತು ಸೆಕ್ಷನ್ 506 ರ ಅಡಿಯಲ್ಲಿ ಜೀವಕ್ಕೆ ಅಪಾಯ ಉಂಟು ಮಾಡಬಲ್ಲ ರೀತಿ ವರ್ತಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article