ಅಕ್ಕ ತಮ್ಮ ಎಂದರೂ ಬಿಡಲಿಲ್ಲ- ನೈತಿಕ ಪೊಲೀಸ್ ಗಿರಿ ನಡೆಸಿದರು



ಬೆಳಗಾವಿ: ಉದ್ಯಾನದಲ್ಲಿ ಮಾತನಾಡುತ್ತಿದ್ದ ಅಕ್ಕ-ತಮ್ಮನನ್ನು ಪ್ರೇಮಿಗಳೆಂದು ಭಾವಿಸಿ, ತೀವ್ರ ಹಲ್ಲೆ ನಡೆಸಿದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ಈ ಪೈಕಿ ಇಬ್ಬರು ಕಾನೂನು ಸಂಘರ್ಷಕ್ಕೊಳಗಾಗಿರುವ ಅಪ್ರಾಪ್ತರಾಗಿದ್ದಾರೆ.


ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಶನಿವಾರ ಬೆಳಗಾವಿಗೆ ಬಂದಿದ್ದ ತಾಲೂಕಿನ ಯಮನಾಪುರ ಗ್ರಾಮದ ಸಚಿನ್ ಲಮಾನಿ (22) ಹಾಗೂ ಮುಸ್ಕಾನ್ ಪಟೇಲ್ (23)- ಇಬ್ಬರು ಕೋಟೆಕೆರೆ ಉದ್ಯಾನದಲ್ಲಿ ಕುಳಿತು ಮಾತನಾಡುತ್ತಿದ್ದರು. ಇವರನ್ನು ಪ್ರೇಮಿಗಳೆಂದು ಭಾವಿಸಿದ ಮುಸ್ಲಿಂ ಸಮುದಾಯದ ಗುಂಪು, ಅವರಿಬ್ಬರನ್ನೂ ಉದ್ಯಾನ ಸಮೀಪದ ಶೆಡ್‌ವೊಂದರಲ್ಲಿ ಕೂಡಿಹಾಕಿ ಯುವಕನನ್ನು ಥಳಿಸಿದೆ. ತಾವು ಪ್ರೇಮಿಗಳಲ್ಲ 'ಅಕ್ಕ-ತಮ್ಮ' ಎಂದು ಅವರಿಬ್ಬರು ಪರಿಪರಿಯಾಗಿ ಕೇಳಿಕೊಂಡರೂ ಬಿಡದೇ ಹಲ್ಲೆ ನಡೆಸಿದೆ.


ನಾವು ಅಕ್ಕ, ತಮ್ಮ ಎಂದರೂ ಬಿಡಲಿಲ್ಲ...


"ಯುವ ನಿಧಿಗೆ ಅರ್ಜಿ ಸಲ್ಲಿಸಲು ಬಂದಿದ್ದ ನಮ್ಮನ್ನು ಶೆಡ್ಡಿಗೆ ಎಳೆದೊಯ್ದರು. ನಾವು ಅಕ್ಕ-ತಮ್ಮ ಎಂದು ಕೇಳಿಕೊಂಡರೂ ಅವರು ಬಿಡಲಿಲ್ಲ. ತಮ್ಮನ ಮೇಲೆ ಹಲ್ಲೆ ನಡೆಸಲಾರಂಭಿಸಿದರು. ಬಳಿಕ ನಾನೇ ಅಮ್ಮನಿಗೆ ಕರೆ ಮಾಡಿ ತಿಳಿಸಿದೆ,'' ಎಂದು ಯಮನಾಪುರ ಗ್ರಾಮದ ಮುಸ್ಕಾನ್ ಪಟೇಲ್ ತಿಳಿಸಿದ್ದಾರೆ.


ಸಚಿನ್ ಲಮಾನಿ(22) ಆಕೆಯ ತಮ್ಮ. ಈ ಇಬ್ಬರ ತಾಯಂದಿರು ಪರಿಶಿಷ್ಟ ಹಿಂದೂಗಳು. ಒಬ್ಬ ಸಹೋದರಿ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿದ್ದು, ಆ ಸಹೋದರಿಯ ಮಗಳು ಮುಸ್ಕಾನ್ ಪಟೇಲ್. ಹಿಂದೂ ಯುವಕನನ್ನು ವರಿಸಿರುವ ಮತ್ತೋರ್ವ ಸಹೋದರಿಯ ಪುತ್ರ ಸಚಿನ್. ಹೀಗಾಗಿ, ಇಬ್ಬರೂ ಅಕ್ಕ-ತಮ್ಮ ಆಗುತ್ತಾರೆ. ಆದರೆ, ಆರೋಪಿಗಳು ಇವರನ್ನು ಪ್ರೇಮಿಗಳೆಂದು ತಿಳಿದು ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ.


ಬಂಧಿತರು


 ಮೊಡ್ಡದಹುಸೇನ್ ಅಲಿಯಾಸ್ ನೂರಹ್ಮದ್ ಇನಾಮ್ಹಾ‌ರ್ (22), ಅತೀಫ್ ಅಹ್ಮದ್ ಅಬ್ದುಲಮಜೀಮ್ ಶೇಖ (22), ಮಹ್ಮದ್‌ಅಮನ್ ಗುಲಾಮ ಹುಸೇನ ಚಾಕುಬಸವಾರ(27), ಸೈಫ್‌ಅಲಿ ನಸೀಮಮುಲ್ಲನಿ ಇಸ್ಮಾಯಿಲ್ಮಗದುಮ್ (27), ಉಮರಸಾಕ ಬಡೇಗರ(21), ರಿಹಾನ್ಮಹ್ಮದಗೌಸ್ ರೋಟಿವಾಲೆ (19), ಅಜಾನ್ ಕಾಲಕುಂದ್ರಿ (19) ಬಂಧಿತರು.