ಅಣ್ಣಾಮಲೈ ಭವಿಷ್ಯದಲ್ಲಿ ತಮಿಳುನಾಡು ಮುಖ್ಯಮಂತ್ರಿ ಆಗುತ್ತಾರೆ: ವಿನಯ್ ಗುರೂಜಿ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್‌ಪಿ ಆಗಿ ಕರ್ತವ್ಯ ನಿರ್ವ ಹಿಸಿ ಸದ್ಯ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಕೆ.ಅಣ್ಣಾಮಲೈ ಅವರು ಮುಂದೊಂದು ದಿನ ತಮಿಳುನಾಡು ಮುಖ್ಯಮಂತ್ರಿಯಾಗುತ್ತಾರೆ ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಆದಿತ್ಯವಾರ ಕಡೂರು ತಾಲೂಕು ಯಗಟಿಯಲ್ಲಿ ಜರಗಿದ ಕವಿ ಕುಮಾರವ್ಯಾಸ ಜಯಂತಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಅಣ್ಣಾಮಲೈ ಅವರನ್ನು ಚಿಕ್ಕಮಗಳೂರಿನಲ್ಲಿ ಭೇಟಿಯಾಗಿದ್ದಾಗ, ನೀವು ಮುಂದೊಂದು ದಿನ ತಮಿಳುನಾಡಿನ ಮುಖ್ಯಮಂತ್ರಿ ಆಗುತ್ತೀರಿ ಎಂದಿದ್ದೆ.
ತಮಿಳುನಾಡಿನಲ್ಲಿಧರ್ಮಬೆಳೆಯುತ್ತದೆ. ತಿರುವಣ್ಣಾಮಲೈ ದೇವಸ್ಥಾನಕ್ಕೆ ಸದಾ ಭೇಟಿ ಕೊಡುತ್ತಿರಿ ಎಂದು ಅವರಿಗೆ ಹೇಳಿದ್ದೆ. ಅವರನ್ನು ಭೇಟಿಯಾದಾ ಗಲೆಲ್ಲ 2 ಸೇಬು ಹಣ್ಣುಗಳನ್ನು ನೀಡಿ ಆಶೀರ್ವದಿಸಿದ್ದೇನೆ ಎಂದರು.