ಚಾಲಕನಿಂದ ದಿಢೀರ್ ಬ್ರೇಕ್- ಬಸ್ ನಿಂದ ಬಿದ್ದು ಮಹಿಳೆ ಸಾವು



ಮಂಗಳೂರು: ಚಾಲಕ ದಿಢೀರ್  ಬ್ರೇಕ್ ಹಾಕಿದ ಪರಿಣಾಮ ಬಸ್ ನೊಳಗಿದ್ದ ಮಹಿಳೆ ಕೆಳ ಬಿದ್ದು ಮೃತಪಟ್ಟ ಘಟನೆ ನಗರದ ಹೊರವಲಯದ ಜೋಕಟ್ಟೆ ಎಂಬಲ್ಲಿ ನಡೆದಿದೆ.


ಈರಮ್ಮ‌ (65) ಸಾವನ್ನಪ್ಪಿದ ಮಹಿಳೆ


ಇಂದು  ಬೆಳಿಗ್ಗೆ ಸುಮಾರು 10 ಗಂಟೆಗೆ ಈರಮ್ಮ  ಎಂಬ ಮಹಿಳೆ  ತನ್ನ ಪುತ್ರಿಯೊಂದಿಗೆ  ಖಾಸಗಿ ಬಸ್ಸಿನಲ್ಲಿ ಸುರತ್ಕಲ್ ಕಡೆಗೆ ಪ್ರಯಾಣಿಸುತ್ತಿದ್ದಳು. ಬಸ್  ಜೋಕಟ್ಟೆ ಕ್ರಾಸ್ ಬಳಿಯ ಸರ್ವೀಸ್ ಸ್ಟೇಷನ್ ತಲುಪಿದಾಗ, ಬೆಳಿಗ್ಗೆ 10:10 ರ ಸುಮಾರಿಗೆ, ಅದರ ಚಾಲಕ  ಅನಿಲ್ ಜಾನ್ ಲೋಬೋ ಹಠಾತ್  ಬ್ರೇಕ್ ಹಾಕಿದ್ದಾರೆ.


ಬಸ್ ಚಾಲಕನ ದಿಢೀರ್ ಬ್ರೇಕ್ ಗೆ  ಚಾಲಕನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಈರಮ್ಮ ಬಸ್‌ನಿಂದ ಕೆಳಗೆ ಬಿದ್ದಿದ್ದಾರೆ.  ಇದಲ್ಲದೆ, ಬಸ್ಸಿನ ಹಿಂದಿನ ಎಡ ಚಕ್ರವು  ಈರಮ್ಮನ ಮೇಲೆ ಚಲಿಸಿದೆ, ಇದರ ಪರಿಣಾಮವಾಗಿ ಅವರಿಗೆ ತಲೆಗೆ ಗಾಯವುಂಟಾಗಿ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾರೆ.


 ಈ ಬಗ್ಗೆ ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.