-->
1000938341
ಹಿಂದೂ ವಿ ವಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ-  ಬೆತ್ತಲೆ ಗೊಳಿಸಿ ವಿಡಿಯೋ ಮಾಡಿ ಫೋಟೋ ತೆಗೆದ ಕಾಮುಕರು

ಹಿಂದೂ ವಿ ವಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಬೆತ್ತಲೆ ಗೊಳಿಸಿ ವಿಡಿಯೋ ಮಾಡಿ ಫೋಟೋ ತೆಗೆದ ಕಾಮುಕರು


ವಾರಣಾಸಿ : ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ 2 ತಿಂಗಳ ಹಿಂದೆ IIT ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ . 


ಬಂಧಿತರನ್ನು ಕುನಾಲ್ ಪಾಂಡೆ, ಆನಂದ್ ಅಲಿಯಾಸ್ ಅಭಿಷೇಕ್ ಚೌಹಾಣ್ ಮತ್ತು ಸಕ್ಷಮ್ ಪಟೇಲ್ ಎಂದು ಗುರುತಿಸಲಾಗಿದೆ.


ನವೆಂಬರ್ 1ರ ರಾತ್ರಿ ಐಐಟಿ-ಬಿಹೆಚ್​ಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಅಂದು ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಹಾಸ್ಟೆಲ್‌ನಿಂದ ಹೊರಗೆ ಹೋಗಿದ್ದಳು. ನಂತರ ಸ್ನೇಹಿತನ ಜೊತೆ ಬರುತ್ತಿದ್ದಾಗ ಮಧ್ಯರಾತ್ರಿ ಬೈಕ್​ನಲ್ಲಿ ಬಂದ ಮೂರು ಮಂದಿ ಆಕೆಯನ್ನು ಬಲವಂತವಾಗಿ ಎಳೆದೊಯ್ದು ಕಿರುಕುಳ ನೀಡಿದ್ದರು. ಅಲ್ಲದೇ, ಆಕೆಯನ್ನು ವಿವಸ್ತ್ರಗೊಳಿಸಿ ವಿಡಿಯೋ ಮಾಡಿ ಫೋಟೋ ತೆಗೆದಿದ್ದರು.


 ಸುಮಾರು 15 ನಿಮಿಷಗಳ ನಂತರ ತನ್ನನ್ನು ಬಿಡಬೇಕಾದರೆ, ಫೋನ್ ನಂಬರ್​ ತೆಗೆದುಕೊಂಡಿದ್ದರು ಎಂದು ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಳು. ಆರೋಪಿಗಳ ಕೃತ್ಯದಿಂದ ಸ್ನೇಹಿತ ಹೆದರಿ ಅಲ್ಲಿಂದ ಓಡಿಹೋಗಿದ್ದ. ಅಲ್ಲದೇ, ಕೂಗಿದರೆ ಕೊಲೆ ಮಾಡುವುದಾಗಿ ಆರೋಪಿಗಳು ನನಗೆ ಬೆದರಿಕೆ ಹಾಕಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಳು.



ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಇಲ್ಲಿನ  ಪೊಲೀಸ್ ಪೊಲೀಸರು ಐಪಿಸಿಯ ಸೆಕ್ಷನ್ 354ರಡಿ ದೌರ್ಜನ್ಯ ಪ್ರಕರಣದ ಜೊತೆಗೆ ಸಾಮೂಹಿಕ ಅತ್ಯಾಚಾರ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

 ಇನ್ನೊಂದೆಡೆ, ಕ್ಯಾಂಪಸ್​ನಲ್ಲಿ ಈ ಘಟನೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ನಡೆಸಿದ್ದರು.

ಇದೀಗ ಎರಡು ತಿಂಗಳ ಬಳಿಕ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್​ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 


ಇದೇ ವೇಳೆ, ಬಂಧಿತರು ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. 'ಶೂನ್ಯ ಸಹಿಷ್ಣುತೆಯ ಸರ್ಕಾರ' ಎಂದು ಕರೆಯಲ್ಪಡುವ ಬಿಜೆಪಿಯಲ್ಲಿ ಆಡಂಬರದ ಹುಡುಕಾಟ ನಡೆಯುತ್ತಿರುವ ಬಿಜೆಪಿಯ ಹಿರಿಯ ನಾಯಕರ ಆಶ್ರಯದಲ್ಲಿ ಬಹಿರಂಗವಾಗಿ ಅರಳುತ್ತಿರುವ ಮತ್ತು ತಿರುಗುತ್ತಿರುವ ಬಿಜೆಪಿ ಕಾರ್ಯಕರ್ತರ ಹೊಸ ಬೆಳೆ ಇದು. ನಿಮ್ಮ ಮಾಹಿತಿಗಾಗಿ: ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ವಿದ್ಯಾರ್ಥಿಯೊಂದಿಗೆ ಅಸಭ್ಯತೆಯ ಮಿತಿ ಮೀರಿದ ಆರೋಪ ಹೊತ್ತಿರುವ ಬಿಜೆಪಿಯ ಉನ್ನತ ನಾಯಕರಿಂದ ರಕ್ಷಣೆ ಪಡೆದ ಬಿಜೆಪಿ ಕಾರ್ಯಕರ್ತರು ಇವರು. ಪ್ರಶ್ನೆ ಎಂದರೆ: ಮಹಿಳೆಯರ ಘನತೆಯ ಜತೆ ಚೆಲ್ಲಾಟವಾಡುವ ಬಿಜೆಪಿ ನಾಯಕರಿಗೆ ಮುಕ್ತಿ ಸಿಗುತ್ತಾ?'' ಎಂದು ಅಖಿಲೇಶ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article