ಮಂಗಳೂರು: ಕೆಐಒಸಿಎಲ್ ಉದ್ಯೋಗಿ ಅಪಘಾತಕ್ಕೆ ಬಲಿ- ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮರಾ ಸೆರೆ
Thursday, January 18, 2024
ಮಂಗಳೂರು: ನಗರದ ಕಾವೂರು ಬಳಿ ಮಂಗಳವಾರ ರಾತ್ರಿ ವೇಳೆ ನಡೆದ ಭೀಕರ ಅಪಘಾತದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವೀಡಿಯೋ ವೈರಲ್ ಆಗಿದೆ.
ಮಂಗಳವಾರ ರಾತ್ರಿ 11ಗಂಟೆ ಸುಮಾರಿಗೆ ಕಾವೂರಿನಲ್ಲಿ ಸಂಭಸಿರುವ ಈ ಅಪಘಾತ ಕೆಐಒಸಿಎಲ್ ಉದ್ಯೋಗಿ ದಾರುಣವಾಗಿ ಮೃತಪಟ್ಟಿದ್ದರು. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದ ರಭಸಕ್ಕೆ ಕಾರು, ಬೈಕ್ ಅನ್ನು ಒಂದಷ್ಟು ದೂರ ಎಳೆದೊಯ್ದಿದ್ದು, ಈ ವೇಳೆ ಬೆಂಕಿಯ ಕಿಡಿ ಎದ್ದಿದ್ದು ಕಂಡುಬಂದಿದೆ. ಬೈಕ್ ಪುಡಿಪುಡಿಯಾಗಿದೆ. ಬೈಕ್ ಸವಾರ ಕೆಐಒಸಿಎಲ್ ಉದ್ಯೋಗಿ ಶೇಖರಪ್ಪ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಕೆಐಒಸಿಎಲ್ ಮಂಗಳೂರು ಪೋರ್ಟ್ ಫೆಸಿಲಿಟೀಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇಖರಪ್ಪನವರು ಕೆಲಸ ಮುಗಿಸಿ ತಮ್ಮ ಕ್ವಾಟರ್ಸ್ ನತ್ತ ಬೈಕ್ ನಲ್ಲಿ ತೆರಳುತ್ತಿದ್ದರು. ಕಾವೂರಿನಲ್ಲಿ ಡಿವೈಡರ್ ನಿಂದ ಬೈಕ್ ತಿರುಗಿಸಿದಾಗ ಬೋಂದೆಲ್‌ನಿಂದ ಕಾವೂರು ಕಡೆಗೆ ಬರುತ್ತಿದ್ದ ಕಾರೊಂದು ವೇಗವಾಗಿ ಬಂದು ಇವರ ಬೈಕಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಶೇಖರಪ್ಪರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.