ಯುಎಇ ಬಂಪರ್ ಲಾಟರಿ: 44 ಕೋ.ರೂ. ಗೆದ್ದ ಭಾರತೀಯ ಚಾಲಕ


ಅಬುದಾಭಿ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ನಡೆದ ಲಕ್ಕಿ
ಬಂಪ‌ರ್ ಲಾಟರಿ ಡ್ರಾನಲ್ಲಿ ಭಾರತೀಯ ಕ್ಯಾಬ್ ಚಾಲಕರೊಬ್ಬರು ಬರೋಬ್ಬರಿ 20 ಮಿಲಿಯನ್ ದಿರ್ಹಾಮ್(44 ಕೋಟಿ ರೂ.) ಬಹುಮಾನ ಗೆದ್ದಿದ್ದಾರೆ.

 ಅಲ್ ಐನ್ ನಗರದಲ್ಲಿ ಖಾಸಗಿ ಕ್ಯಾಬ್‌ನ ಚಾಲಕನಾಗಿ ಕೆಲಸ ಮಾಡುತ್ತಿರುವ ಮುನಾವ‌ರ್ ಫೈರೂಸ್ ಬಹುಮಾನ ಗೆದ್ದ ಅದೃಷ್ಟವಂತರು. ಕಳೆದ ಐದು ವರ್ಷಗಳಿಂದ ಇವರು ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಇದೇ ವೇಳೆ ಅಬುಧಾಬಿ ನಿವಾಸಿ ಸುತೇಶ್ ಕುಮಾರ್ ಕುಮಾರೇಸನ್ ಲಾಟರಿ ಟಿಕೆಟ್‌ನಲ್ಲಿ 1 ಮಿಲಿಯನ್ ದಿರ್ಹಾಮ್ (2.2 ಕೋಟಿ ರೂ.) ಗೆದ್ದಿದ್ದಾರೆ.

 ಇವರು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಾಟರಿ ಖರೀದಿಸಿದ್ದರು.