-->
1000938341
ಸಮಾಜಕ್ಕೆ ಉತ್ತಮ ಸಂದೇಶ ನೀಡುವ: ವಿರಾಸತ್ ಮಾಧ್ಯಮ ಕೇಂದ್ರ ಉದ್ಘಾಟಿಸಿ ಡಾ. ಮೋಹನ ಆಳ್ವ ಕರೆ

ಸಮಾಜಕ್ಕೆ ಉತ್ತಮ ಸಂದೇಶ ನೀಡುವ: ವಿರಾಸತ್ ಮಾಧ್ಯಮ ಕೇಂದ್ರ ಉದ್ಘಾಟಿಸಿ ಡಾ. ಮೋಹನ ಆಳ್ವ ಕರೆ

ಸಮಾಜಕ್ಕೆ ಉತ್ತಮ ಸಂದೇಶ ನೀಡುವ: ವಿರಾಸತ್ ಮಾಧ್ಯಮ ಕೇಂದ್ರ ಉದ್ಘಾಟಿಸಿ ಡಾ. ಮೋಹನ ಆಳ್ವ ಕರೆ





ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಸಂದೇಶವನ್ನು ಆಳ್ವಾಸ್ ವಿರಾಸತ್ ಹೊಂದಿದೆ. ಸತ್ಯವನ್ನೇ ಬರೆಯುವ ಧ್ಯೇಯವನ್ನು ಮಾಧ್ಯಮ ಹೊಂದಿದೆ. ಸಾಂಸ್ಕೃತಿಕವಾಗಿಯೂ ಒಟ್ಟಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಬೇಕು ಎಂದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಕರೆ ನೀಡಿದರು.


ಮೂಡಬಿದಿರೆಯಲ್ಲಿ ಡಿ.14ರಿಂದ 17ರ ವರೆಗೆ ನಡೆಯುವ ‘ಆಳ್ವಾಸ್ ವಿರಾಸತ್ -23’ರ ಮಾಧ್ಯಮ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.


ಸಣ್ಣ ಮಟ್ಟದಿಂದ ಆರಂಭಗೊಂಡ ವಿರಾಸತ್ ಈಗ ಜಾಗತಿಕ ಚಿಂತನೆ ಮೂಲಕ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯ ಕೇಂದ್ರವಾಗಿದೆ. ಇದಕ್ಕೆ ಮಾಧ್ಯಮವೂ ಉತ್ತಮ ಸ್ಪಂದನೆ ನೀಡುತ್ತಿದೆ ಎಂದರು.


ವನ್ಯಜೀವ ಛಾಯಾಗ್ರಾಹಕರಾದ ನಿವೃತ್ತ IFS ಅಧಿಕಾರಿ ಎಂ.ಎನ್. ಜಯ ಕುಮಾರ್ ಮಾತನಾಡಿ, ಸಾಂಸ್ಕೃತಿಕ ಲೋಕ ಅಭಿವೃದ್ದಿಗೂ ಪೂರಕ. ಪತ್ರಕರ್ತರು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಲಿ ಎಂದು ಹಾರೈಸಿದರು.


ಪ್ರತಿಭೆಗಳಿಗೆ ಸಾಂಸ್ಕೃತಿಕ ವೇದಿಕೆಗಳು ಅವಶ್ಯ. ಎಲ್ಲಾ ಪ್ರತಿಭೆಗಳಿಗೂ ಇಲ್ಲಿ ಅವಕಾಶವನ್ನು ಕೊಡಲಾಗುತ್ತದೆ ಎಂದರು.


ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ದೇಶ ಮಾತ್ರವಲ್ಲದೆ ಹೊರ ದೇಶದ ವರೆಗೂ ತಲುಪಿಸುವ ಕಾರ್ಯ ನಡೆಯುತ್ತಿದೆ. ಪತ್ರಕರ್ತರು ಕೇವಲ ವರದಿ ಮಾತ್ರವಲ್ಲದೆ, ಈ ವಿರಾಸತ್ ಉತ್ಸವವನ್ನ ಅಸ್ವಾದಿಸಬೇಕು ಎಂದು ಹೇಳಿದರು.


ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಖಜಾಂಚಿ ಬಿ.ಎನ್. ಪುಷ್ಪರಾಜ್, ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ಯಶೋಧರ ಕರ್ಕೇರ, ಕಾರ್ಯದರ್ಶಿ ಪ್ರೇಮಾಶ್ರೀ ಕಲ್ಲಬೆಟ್ಟು, ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಇದ್ದರು. ಆಳ್ವಾಸ್‌ನ ವಿದ್ಯಾರ್ಥಿ ಅವಿನಾಶ್ ಕಟೀಲ್ ನಿರೂಪಿಸಿದರು.



Ads on article

Advertise in articles 1

advertising articles 2

Advertise under the article