ಯುರೋಪ್ ನಲ್ಲಿ ಇಸ್ಲಾಂಗೆ ಜಾಗವಿಲ್ಲ, ಷರಿಯಾ ಕಾನೂನು ಜಾರಿಗೊಳಿಸಲು ಬಿಡುವುದಿಲ್ಲ - ಇಟಲಿ ಪ್ರಧಾನಿ
Tuesday, December 19, 2023
ನವದೆಹಲಿ: ಇಸ್ಲಾಂ ಸಂಸ್ಕೃತಿ ಯುರೋಪ್ ನೆಲಕ್ಕೆ ಹೊಂದಾಣಿಕೆಯಾಗುವುದಿಲ್ಲ. ಆದ್ದರಿಂದ ಯುರೋಪ್ ನಲಗಲಿ ಷರಿಯಾ ಕಾನೂನು ಜಾರಿಗೊಳಿಸಲು ಬಿಡುವುದಿಲ್ಲ. ಇಸ್ಲಾಮಿಗೆ ಯುರೋಪಿನಲ್ಲಿ ಜಾಗವಿಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿರುವ ಹಳೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಯುರೋಪ್ ರಾಷ್ಟ್ರಗಳಿಗೆ ಇಸ್ಲಾಮಿಕ್ ಕಾನೂನು ಹಾಗೂ ಸಂಸ್ಕೃತಿ ಹೊಂದಾಣಿಕೆಯಾಗುವುದಿಲ್ಲ ಎನ್ನುವುದು ನನ್ನ ನಂಬಿಕೆ. ಯುರೋಪಿನ ಕಾನೂನು, ನಾಗರಿಕತೆಯ ಮೌಲ್ಯಗಳು ಪೂರ್ತಿಯಾಗಿ ಡಿಫರೆಂಟ್ ಆಗಿವೆ ಎಂದು ಜಾರ್ಜಿಯಾ ಹೇಳಿದ್ದಾರೆ.
ಇಟಲಿಯಲ್ಲಿರುವ ಬಹುತೇಕ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಗಳು ಸೌದಿ ಅರೇಬಿಯಾದ ಹಣದಿಂದಲೇ ನಡೆಸಲ್ಪಡುತ್ತಿವೆ ಅನ್ನೋದು ತಿಳಿದಿದೆ. ಸೌದಿ ಅರೇಬಿಯಾದಲ್ಲಿ ಷರಿಯಾ ಕಾನೂನು ಇದೆ. ಷರಿಯಾ ಕಾನೂನು ಅಂದ್ರೆ, ವ್ಯಭಿಚಾರ ಮಾಡಿದ್ರೆ ಕಲ್ಲು ಹೊಡೆಯುವುದು, ಧರ್ಮ ವಿರೋಧಿಗಳಿಗೆ, ಸಲಿಂಗ ಕಾಮಿಗಳಿಗೆ ಗಲ್ಲು ಶಿಕ್ಷೆ ನೀಡುವುದು. ಈ ವಿಚಾರ ಹೆಚ್ಚು ಪ್ರಚಾರಕ್ಕೆ ಬರಬೇಕಾಗಿದೆ. ಹಾಗೆ ಮಾಡಿದ್ರೆ, ಇಸ್ಲಾಮ್ ಜನರಲೈಸ್ ಮಾಡೋದೆಂದು ಅರ್ಥವಲ್ಲ. ಇಸ್ಲಾಮಿನ ನ್ಯೂನತೆಗಳನ್ನು ಹೆಚ್ಚು ತೋರಿಸಬೇಕಾಗಿದೆ. ನಮ್ಮ ಯುರೋಪ್ ಸಂಸ್ಕೃತಿಗೆ ತುಂಬ ವಿಭಿನ್ನ ರೀತಿಯದು ಇಸ್ಲಾಂ ಎಂದವರು ಹೇಳಿದ್ದಾರೆ.