ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆ ದೋಷಿ
Saturday, December 30, 2023
ಹೊಸದಿಲ್ಲಿ: ನೇಪಾಳದ ಕ್ರಿಕೆಟಿಗ, ನೇಪಾಳ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸಂದೀಪ್ ಲಮಿಚಾನೆಯನ್ನು ಶುಕ್ರವಾರ ಕಲ್ಮಂಡುವಿನ ಜಿಲ್ಲಾ ನ್ಯಾಯಾಲಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ.
ಕಂಟ್ಮಂಡುವಿನ ಹೊಟೇಲ್ ಕೊಠಡಿಯಲ್ಲಿ ಸಂದೀಪ್ ಲಮಿಚಾನೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 17 ವರ್ಷದ ಅಪ್ರಾಪ್ತೆ ಆರೋಪಿಸಿದ್ದಳು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಈ ವರ್ಷದ ಜನವರಿಯಲ್ಲಿ ಕ್ರಿಕೆಟಿಗನನ್ನು ಪಟಾನಿನ ಹೈಕೋರ್ಟ್ ಜಾಮೀನು ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು. ಕಳೆದ ರವಿವಾರ ಈ ಪ್ರಕರಣದ ವಿಚಾರಣೆಯು ಪೂರ್ಣಗೊಂಡ ಬಳಿಕ ಏಕಪೀಠದ ನೇತೃತ್ವವಹಿಸಿದ್ದ ನ್ಯಾಯಾಧೀಶ ಶಿಶಿರ್ ರಾಜ್ ಧಾಕಲ್ ಶುಕ್ರವಾರ ತೀರ್ಪು ನೀಡಿದ್ದರು.
ಕಂಟ್ಮಂಡುವಿನ ಜಿಲ್ಲಾ ನ್ಯಾಯಾಲಯವು ಸಂದೀಪ್ ಅತ್ಯಾಚಾರದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ನೇಪಾಳದ ಹಿರಿಯ ಕ್ರಿಕೆಟಿಗನಿಗೆ ಜೈಲು ಶಿಕ್ಷೆಯನ್ನು ನ್ಯಾಯಾಲಯವು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಿದೆ ಎಂದು ಕಂಡು ಪೋಸ್ಟ್ ವರದಿ ಮಾಡಿದೆ.
23ವರ್ಷದ ಸಂದೀಪ್ ನೇಪಾಳದ ಪ್ರಮುಖ ಕ್ರಿಕೆಟಿಗನಾಗಿದ್ದು, ಐಪಿಎಲ್ ನಲ್ಲಿ ಕಾಣಿಸಿಕೊಂಡ ನೇಪಾಳದ ಮೊದಲ ಆಟಗಾನಾಗಿದ್ದನು. ಸಂದೀಪ್ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮೂಲಕ ಐಪಿಎಲ್ ಗೆ ಕಾಲಿಟ್ಟಿದ್ದರು.