-->

ಈ ಸ್ಟಾರ್ ನಟನ ಪುತ್ರ ಈಗ ಐಎಎಸ್ ಅಧಿಕಾರಿ

ಈ ಸ್ಟಾರ್ ನಟನ ಪುತ್ರ ಈಗ ಐಎಎಸ್ ಅಧಿಕಾರಿ


ನವದೆಹಲಿ: ಸಾಮಾನ್ಯವಾಗಿ ನಟ - ನಟಿಯರ ಮಕ್ಕಳೂ ಕೂಡಾ ಸಿನಿತೆರೆ ಮೇಲೆ ರಾರಾಜಿಸಲು ಬಯಸುತ್ತಾರೆ‌. ಅದೇ ಕ್ಷೇತ್ರದಲ್ಲಿಯೇ ಉಳಿಯಲು ಬಯಸುತ್ತಾರೆ. ಆದರೆ ತಮಿಳುನಾಡಿನ ಖ್ಯಾತ ಕಲಾವಿದರೊಬ್ಬರ ಪುತ್ರ ವಿಭಿನ್ನವಾಗಿ ಯೋಚಿಸಿ ಇಂದು ಉನ್ನತ ಹುದ್ದೆಯಲ್ಲಿದ್ದಾರೆ.

ತಮಿಳು ಸಿನಿಮಾದ ಖ್ಯಾತ ಹಾಸ್ಯನಟ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಚಿನ್ನ ಜಯಂತ್ ಅವರ ಪುತ್ರ ಶ್ರುತಂಜಯ ನಾರಾಯಣನ್ ಅವರು ಐಎಎಸ್ ಅಧಿಕಾರಿಯಾಗಿದ್ದಾರೆ. ಸಾಮಾನ್ಯವಾಗಿ ನಟರ ಮಕ್ಕಳು ತಾವೂ ಬಣ್ಣದ ಲೋಕದಲ್ಲಿ ಮಿಂಚಬೇಕೆಂದು ಅಂದುಕೊಳ್ಳುತ್ತಾರೆ. ಆದರೆ ಇವರು ಕಷ್ಟಪಟ್ಟು ಓದಿ ನಾಗರಿಕ ಸೇವಾ ಆಯೋಗವನ್ನು ಆಯ್ಕೆ ಮಾಡಿದ್ದಾರೆ. ಇವರ ಐಎಎಸ್  ಯಶಸ್ವಿ ಪಯಣ ಹೇಗಿತ್ತು ಎಂದು ತಿಳಿಯೋಣ.


ಶ್ರುತಂಜಯ ಅವರ ತಂದೆ ಚಿನ್ನಿ ಜಯಂತ್ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಹಾಸ್ಯ ಮತ್ತು ಪಾತ್ರ ಕಲಾವಿದರಾಗಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಇವರ ಪುತ್ರ ಶಾಲಾ-ಕಾಲೇಜು ದಿನಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದರೂ ಗುರಿಯೇ ಬೇರೆ. ಶ್ರುಂತಜಯ ನಾರಾಯಣನ್ ಗುಂಡಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಹಾಗೂ ಅಶೋಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಬಳಿಕ, ಅವರು ಹೆಚ್ಚಿನ ದುಡಿಮೆಗಾಗಿ ಸ್ಟಾರ್ಟ್ ಅಪ್ ಕಂಪೆನಿಗೆ ಸೇರಿದರು. ರಾತ್ರಿ ಪಾಳಿಯಲ್ಲಿ ಮಾತ್ರ ಕೆಲಸ ಮಾಡುತ್ತಿದ್ದ ಅವರು ಬೆಳಗ್ಗೆ UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. 

ರಾತ್ರಿಯಿಡೀ ದುಡಿದು ಬೆಳಗ್ಗೆ ಐದು ಗಂಟೆಗೆ ಯುಪಿಎಸ್ ಸಿಗೆ ಸಿದ್ಧತಡ ನಡೆಸುತ್ತಿದ್ದರು. ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ, ದಿನಕ್ಕೆ 10 ಗಂಟೆಗಳನ್ನು ಯುಪಿಎಸ್ ಸಿ ತಯಾರಿಗಾಗಿ ಮೀಸಲಿಟ್ಟರು. ಅಂತಿಮವಾಗಿ 2015 ರಲ್ಲಿ ಯಶಸ್ವಿಯಾಗಿ ಅಖಿಲ ಭಾರತ ಮಟ್ಟದಲ್ಲಿ 75ನೇ ರ‍್ಯಾಂಕ್ ಗಳಿಸಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆದರು.

ನಾರಾಯಣನ್ ಪ್ರಸ್ತುತ ತಮಿಳುನಾಡಿನ ತ್ರಿಪುರಾ ಜಿಲ್ಲೆಯಲ್ಲಿ ಸಬ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಚಿತ್ರರಂಗದಲ್ಲಿ ಒಳ್ಳೆ ಹೆಸರು ಗಳಿಸಿದ್ದರೂ ಗ್ಲಾಮರ್ ಕ್ಷೇತ್ರದಲ್ಲಿ ಆಸಕ್ತಿ ಇರಲಿಲ್ಲ. ಚಿತ್ರರಂಗಕ್ಕೆ ಪ್ರವೇಶಿಸುವ ಬದಲು ನಾಗರಿಕ ಸೇವೆಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಅವರ ನಿರ್ಧಾರವು ಅವರ ಅಸಾಧಾರಣ ನಿರ್ಣಯ ಮತ್ತು ಅಚಲ ಬದ್ಧತೆಗೆ ಸಾಕ್ಷಿಯಾಗಿದೆ.  

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article