-->

ಮಂಗಳೂರಿನಲ್ಲಿ  ಹೊಸವರ್ಷಾಚರಣೆಗೆ ರಾತ್ರಿ 10 ಗಂಟೆ ಬಳಿಕ ಬೀಚ್ ಗೆ ಹೋಗಬೇಡಿ- ಅವಕಾಶ ಇಲ್ಲ

ಮಂಗಳೂರಿನಲ್ಲಿ ಹೊಸವರ್ಷಾಚರಣೆಗೆ ರಾತ್ರಿ 10 ಗಂಟೆ ಬಳಿಕ ಬೀಚ್ ಗೆ ಹೋಗಬೇಡಿ- ಅವಕಾಶ ಇಲ್ಲ


 


ಮಂಗಳೂರು: ಮಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲಾಗಿದ್ದು, ಬೀಚ್ ಸೇರಿದಂತೆ ಹೊರಾಂಗಣದಲ್ಲಿ ನಡೆಯುವ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ.


ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್  ಅನುಪಮ್ ಅಗರ್ ವಾಲ್   ಬೀಚ್ ನಲ್ಲಿ ಹೊಸ ವರ್ಷ ಆಚರಣೆಗೆ 10 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ನೈತಿಕ ಪೊಲೀಸ್ ಗಿರಿ ಸೇರಿದಂತೆ ಅಹಿತಕರ ಘಟನೆಗಳಿದ್ದಲ್ಲಿ ಸಂಪರ್ಕಿಸಲು ಪೊಲೀಸರ ಸಂಪರ್ಕ ಸಂಖ್ಯೆಗಳನ್ನು ಬೀಚ್ ಗಳಲ್ಲಿ ಪ್ರದರ್ಶಿಸಲಾಗುತ್ತದೆ. ಅಲ್ಲದೆ 112 ಕರೆ ಮಾಡಿ ತಿಳಿಸಬಹುದು ಎಂದು ತಿಳಿಸಿದರು.


ಮಂಗಳೂರಿನಲ್ಲಿ 36 ಕಡೆಗಳಲ್ಲಿ ಒಳಾಂಗಣದಲ್ಲಿ ಹೊಸವರ್ಷಾಚರಣೆಗೆ ಅನುಮತಿಯನ್ನು ಕೇಳಿದ್ದಾರೆ. ಬೀಚ್ ಸೇರಿದಂತೆ ಕೆಲವು ಹೊರಾಂಗಣದಲ್ಲೂ ಹೊಸವರ್ಷಾಚರಣೆಗೆ ಅನುಮತಿ ಕೇಳಿದ್ದಾರೆ. ಆದರೆ ಒಳಾಂಗಣದಲ್ಲಿ ರಾತ್ರಿ 12.30ವರೆಗೆ, ಹೊರಾಂಗಣದಲ್ಲಿ ರಾತ್ರಿ 10 ಗಂಟೆವರೆಗೆ ಹೊಸವರ್ಷಾಚರಣೆಗೆ ಅವಕಾಶ ನೀಡಲಾಗಿದೆ. ಮುನ್ನೆಚ್ಚರಿಕಾ ದೃಷ್ಟಿಯಿಂದ 850 ಪೊಲೀಸರ ನಿಯೋಜನೆ ಮಾಡಲಾಗುತ್ತದೆ. ಜೊತೆಗೆ ಸಿಎಆರ್ ನಿಂದ 8 ತಂಡಗಳು, ಕೆಎಸ್ ಆರ್ ಪಿಯಿಂದ 3 ತುಕುಡಿಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದರು.


ಹೊಸ ವರ್ಷಾಚರಣೆ ಸಂದರ್ಭ ನಡೆಯುವ ನೈತಿಕ ಪೊಲೀಸ್ ಗಿರಿ ತಡೆಯಲು ಹೊರಾಂಗಣ ಪಾರ್ಟಿ ನಡೆಯುವ ಪ್ರದೇಶ, ಅತಿಹೆಚ್ಚು ಜನಸಂದಣಿ ಸೇರುವ ಜಾಗಗಳಲ್ಲಿ ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನೊಳಗೊಂಡ ಫ್ಲೆಕ್ಸ್ ಗಳನ್ನು ಹಾಕಲಾಗುವುದು ಎಂದರು.
ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದ್ದು, 66 ತಂಡಗಳನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. 106 ಪ್ರದೇಶದಲ್ಲಿ ನಾಕಾ ಬಂದಿ ಮಾಡಲಿದ್ದೇವೆ. ಡ್ರಗ್ಸ್ ಪಾರ್ಟಿ ಬಗ್ಗೆಯೂ ಕ್ರಮ ಕೈಗೊಂಡಿದ್ದೇವೆ. ರಾಜ್ಯದ ನಿಯಾಮಾವಳಿ ಜೊತೆಗೆ ನಮ್ಮ ನಿಯಮಗಳನ್ನು ಸೇರಿಸಿದ್ದೇವೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದರು.ಬೈಟ್: ಅನುಪಮ್ ಅಗರ್ವಾಲ್ , ಪೊಲೀಸ್ ಕಮಿಷನರ್ , ಮಂಗಳೂರು

Ads on article

Advertise in articles 1

advertising articles 2

Advertise under the article