-->
ಜಾಮೀನು ಮೇಲೆ ಹೊರಬಂದಿರುವ ಅತ್ಯಾಚಾರ ಆರೋಪಿ ಸಂತ್ರಸ್ತೆಯನ್ನು ಅಟ್ಟಾಡಿಸಿ ಕೊಲೆಗೈದ

ಜಾಮೀನು ಮೇಲೆ ಹೊರಬಂದಿರುವ ಅತ್ಯಾಚಾರ ಆರೋಪಿ ಸಂತ್ರಸ್ತೆಯನ್ನು ಅಟ್ಟಾಡಿಸಿ ಕೊಲೆಗೈದ


ಹೊಸದಿಲ್ಲಿ: ಅತ್ಯಾಚಾರ ಮಾಡಿರುವಾತ ಹಾಗೂ ಆತನ ಸಹೋದರ ಸಂತ್ರಸ್ತೆಯನ್ನು ಅಟ್ಟಾಡಿಸಿ ಬೆನ್ನಟ್ಟಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಡೇರಾ ಗ್ರಾಮದಲ್ಲಿ ನಡೆದಿದೆ.‌ ಕೆಲವು ದಿನಗಳ ಹಿಂದಷ್ಟೇ ಹಂತಕರಾದ ಅಶೋಕ್ ಹಾಗೂ ಪವನ್ ನಿಶಾದ್‌ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

19ವರ್ಷದ ಈ ಯುವತಿ ಅಪ್ರಾಪ್ತೆಯಾಗಿದ್ದ ವೇಳೆ ಅಂದರೆ ಮೂರು ವರ್ಷಗಳ ಹಿಂದೆ ಆಕೆಯ ಮೇಲೆ ಅತ್ಯಾಚಾರಗೈದ ಆರೋಪ ಪವನ್‌ ನಿಶಾದ್‌ ಮೇಲಿತ್ತು. ಆ ಘಟನೆ ನಡೆದ ದಿನದಿಂದ ಪವನ್ ನಿಶಾದ್ ಹಾಗೂ ಆತನ ಸಹಚರರಿಂದ ಪ್ರಕರಣ ಕೈಬಿಡುವಂತೆ ಒತ್ತಡ ಹೇರಲು ಆಕೆಗೆ ಕಿರುಕುಳ ನೀಡುತ್ತಿದ್ದರು. ಪವನ್ ಸಹೋದರ ಅಶೋಕ್‌ ಬೇರೊಂದು ಕೊಲೆ ಪ್ರಕರಣದ ಆರೋಪಿಯಾಗಿದ್ದ. ಈತ ಈ ಕೊಲೆ ನಡೆಯುವುದಕ್ಕಿಂತ ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ. ಈ ಬಾರಿ ಹೇಗಾದರೂ ಯುವತಿಯ ಕುಟುಂಬದ ಮೇಲೆ ಒತ್ತಡ ಹೇರಿ ದೂರು ವಾಪಸ್‌ ಪಡೆಯುವ ಉದ್ದೇಶ ಅವರಿಗಿತ್ತು.

ಆದರೆ ಅವರು ಒಪ್ಪದಿದ್ದಾಗ, ಜಾನುವಾರುಗಳನ್ನು ಮೇಯಿಸಿ ವಾಪಸ್ ಕರೆತರುತ್ತಿದ್ದ ಸಂತ್ರಸ್ತೆಯನ್ನು ಅಟ್ಟಾಡಿಸಿ ಕೊಲೆಗೈಯ್ಯಲಾಗಿದೆ. ಯುವತಿಯನ್ನು ಮುಖ್ಯ ರಸ್ತೆಯಲ್ಲಿಯೇ ಕತ್ತಿಯಿಂದ ಕೊಚ್ಚಿ ಕೊಲೆಗೈದಿದ್ದಾರೆ. ಈ ದೃಶ್ಯವನ್ನು ಗ್ರಾಮಸ್ಥರು ಭಯಭೀತರಾಗಿ, ನಿಸ್ಸಹಾಯಕರಾಗಿ ನೋಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದು ಪೊಲೀಸರು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article