MANGALORE- ಅರ್ಧದಲ್ಲಿಯೆ ಸ್ಥಗಿತಗೊಂಡ ಅಪಾರ್ಟ್ಮೆಂಟ್ LIFT- ಅಗ್ನಿಶಾಮಕ ದಳದಿಂದ ಐವರ ರಕ್ಷಣೆ
Saturday, November 25, 2023
ಮಂಗಳೂರು: ನಗರದ ಅಪಾರ್ಟ್ಮೆಂಟ್ ವೊಂದರ ಲಿಪ್ಟ್ ಅರ್ಧದಲ್ಲಿಯೆ ಸ್ಥಗಿತಗೊಂಡ ಘಟನೆ ನಡೆದಿದ್ದು, ಲಿಪ್ಟ್ ನಲ್ಲಿದ್ದ ಐವರನ್ನು ರಕ್ಷಿಸಲಾಗಿದೆ.
ನಗರದ ಬೆಂದೂರಿನಲ್ಲಿರುವ ಶಿಲ್ಪ ಪ್ಯಾಲೇಸ್ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಸಂಜೆ 6.30 ರ ಸುಮಾರಿಗೆ ಐವರು ಯುವಕರು ಲಿಪ್ಟ್ ನಿಂದ ಮೇಲಿನ ಮಹಡಿಗೆ ಹೋಗುತ್ತಿದ್ದ ವೇಳೆ ಲಿಪ್ಟ್ ಒಂದನೇ ಮಹಡಿಯ ಮೇಲೆ ಹೋಗಿ ಸ್ಥಗಿತಗೊಂಡಿದೆ. ಪರಿಣಾಮ ಲಿಪ್ಟ್ ನೊಳಗಿದ್ದ ಐವರು ಲಿಪ್ಟ್ ನಲ್ಲಿ ಬಂಧಿಯಾಗಿದ್ದರು.
ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೂರನೇ ಮಹಡಿಯಿಂದ ಒಂದನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಲಿಪ್ಟ್ ಎಳೆದು ಮೇಲೆ ತಂದಿದ್ದಾರೆ. ಆ ಮೂಲಕ ಐವರು ಯುವಕರನ್ನು ರಕ್ಷಿಸಿದ್ದಾರೆ.