ವೃದ್ಧನಿಂದ ಚಪ್ಪಲಿ ಏಟು ತಿಂದ ಕಾಂಗ್ರೆಸ್ ಅಭ್ಯರ್ಥಿ



ಮಧ್ಯಪ್ರದೇಶ: ಚುನಾವಣೆಯ ವೇಳೆ ಮತಗಳನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ತಂತ್ರಗಳನ್ನು  ಮಾಡುತ್ತಾರೆ. ಇದೇ ತಂತ್ರವನ್ನು ಮಾಡಿರುವ ಮಧ್ಯಪ್ರದೇಶದ ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪರಾಸ್ ಸಕ್ಲೇಚಾ ವೃದ್ಧರೊಬ್ಬರಿಂದ ಚಪ್ಪಲಿ ಏಟು ತಿಂದಿರುವ ವೀಡಿಯೋ ವೈರಲ್ ಆಗಿದೆ.

ಪರಾಸ್ ಸಕ್ಲೇಚಾ ಈ ವೃದ್ಧನಿಂದ ಸ್ವಇಚ್ಛೆಯಿಂದ ಮತ್ತು ಸಂತೋಷದಿಂದ ಹೊಡೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಚಪ್ಪಲಿ ಏಟು ನೀಡಿರುವ ವೃದ್ಧನನ್ನು ಸ್ಥಳೀಯವಾಗಿ ಪವಾಡಪುರುಷ ಎಂದು ನಂಬುತ್ತಿದ್ದಾರೆ. ಅವರಿಂದ ಹೊಡೆಸಿಕೊಂಡರೆ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರದಿಂದ ಕಾಂಗ್ರೆಸ್ ಅಭ್ಯರ್ಥಿ ಚಪ್ಪಲಿಯಿಂದ ಹೊಡೆಸಿಕೊಂಡಿದ್ದಾರೆ.


ಶುಕ್ರವಾರ ಮಧ್ಯಪ್ರದೇಶ ವಿಧಾನಸಭೆಗೆ ಮತದಾನ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ರತ್ಲಾಮ್ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪರಸ್ ಸಕ್ಲೇಚಾ ಶುಕ್ರವಾರ ಬೆಳಗ್ಗೆ ರಸ್ತೆಬದಿಯಲ್ಲಿದ್ದ ಫಕೀರ್ ಬಾಬಾ ಬಳಿ ಹೋಗಿ ಚಪ್ಪಲಿಯಿಂದ ಹೊಡೆದು ಆಶೀರ್ವಾದ ಪಡೆದರು. 

ಬಾಬಾರನ್ನು ಭೇಟಿ ಮಾಡಿದ ಪಾರಸ್ ಸಕ್ಲೇಚಾ ಅವರು  ಹೊಸ ಚಪ್ಪಲಿಗಳನ್ನು ಅರ್ಪಿಸಿದರು. ಬಾಬಾ ಅದನ್ನು ತೆಗೆದುಕೊಂಡು ಪಾರಸ್ ನೆತ್ತಿಯನ್ನು ತಟ್ಟಿದರು. ಆ ನಂತರ ಎರಡೂ ಕೆನ್ನೆಗಳನ್ನು ಚಪ್ಪಲಿಯಿಂದ ಮುಟ್ಟುವಂತೆ ಕೇಳಿಕೊಂಡರು. ಈ ಹೊಡೆತಕ್ಕೆ ಮತಗಳು ಸಿಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.