ತೂಕ ಇಳಿಕೆ ಮಾಡಬೇಕೆಂದುಕೊಳ್ಳುವವರು ಬೆಳಿಗ್ಗೆ ಬೇಗನೆ ಏಳಲು ಪ್ರಯತ್ನಿಸಬೇಕು. ಆಯುರ್ವೇದದ ಪ್ರಕಾರ ಬೆಳಗ್ಗೆ ಬೇಗ ಏಳುವುದರಿಂದ ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ. ಜೊತೆಗೆ ಬೊಜ್ಜು ಕೂಡ ದೂರವಾಗುತ್ತದೆ.
ಉಗುರು ಬೆಚ್ಚನೆಯ ನೀರನ್ನು ಕುಡಿಯಿರಿ:
ಬೆಳಿಗ್ಗೆ ಎದ್ದ ತಕ್ಷಣ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು. ಇದಕ್ಕೆ ಜೇನು ತುಪ್ಪ ಮತ್ತು ನಿಂಬೆರಸವನ್ನು ಬೆರೆಸಿ ಕುಡಿದರೆ ಎಲ್ಲದಕ್ಕಿಂತ ವೇಗವಾಗಿ ತೂಕ ಇಳಿಸಬಹುದು.
ಏರೋಬಿಕ್ಸ್:
ತೂಕ ಇಳಿಸಲೆಂದು ಅನೇಕರು ಜಿಮ್’ನಲ್ಲಿ ವೇಟ್‌ಲಿಫ್ಟಿಂಗ್ ಮಾಡುತ್ತಾರೆ. ಆದರೆ ಅದರ ಬದಲು ಏರೋಬಿಕ್ಸ್, ಬ್ರಿಸ್ಕ್ ವಾಕ್, ಸೈಕ್ಲಿಂಗ್, ಈಜು ಮುಂತಾದ ಸರಳ ವ್ಯಾಯಾಮಗಳನ್ನು ಮಾಡಿದರೆ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಪೌಷ್ಟಿಕ ಉಪಹಾರ:
ತೂಕ ಇಳಿಸಿಕೊಳ್ಳಬೇಕೆಂದು ಇಚ್ಛಿಸುವ ಜನರು ಬೆಳಗಿನ ಉಪಾಹಾರದಲ್ಲಿ ಪೌಷ್ಟಿಕಾಂಶ-ಭರಿತ ಆಹಾರಗಳನ್ನು ಮಾತ್ರ ಸೇವಿಸಬೇಕು. ಅದರಲ್ಲಿ ಪ್ರೋಟೀನ್, ಫೈಬರ್, ಜ್ಯೂಸ್, ಹಣ್ಣುಗಳು, ಓಟ್ಸ್ ಇತ್ಯಾದಿಗಳನ್ನು ಕೂಡ ಸೇರಿಸಿಕೊಳ್ಳಬಹುದು.