-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ದ ಕ ಜಿಲ್ಲಾ ಚಿತ್ರ ಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ

ದ ಕ ಜಿಲ್ಲಾ ಚಿತ್ರ ಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ

ಚಿತ್ರಕಲಾ ಶಿಕ್ಷಕರು ಭಾವನಾತ್ಮಕವಾಗಿರುತ್ತಾರೆ.
ಪ್ರಕೃತಿಯ ಸೌಂದರ್ಯ ವನ್ನು ಕಣ್ಣಲ್ಲೇ ಸೆರೆಹಿಡಿದು ಚಿತ್ರಿಸುವ ಸಾಮಾರ್ಥ್ಯ ವುಳ್ಳವರು ಕಲಾದೇವಿಯ ಸೇವೆಯನ್ನು ಕಲೆಯ ಮೂಲಕ ಮಾಡುವ ಚಿತ್ರ ಕಲಾ ಶಿಕ್ಷಕರು ಭಾಗ್ಯವಂತರು  ಎಂದು ದಕ್ಷಿಣ ಕನ್ನಡ ಚಿತ್ರ ಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸುತ್ತಾ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮಂಜುನಾಥನ್ ಎಂ.ಜಿ ರವರು ಅಭಿಪ್ರಾಯ ವ್ಯಕ್ತಪಡಿಸಿದರು.


 ಮುಖ್ಯ ಅತಿಥಿಯಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯ ಹಿರಿಯ ಉಪನ್ಯಾಸಕರಾದ ಶ್ರೀ ಶ್ರೀನಿವಾಸ ಅಡಿಗ ರವರು  ' ಶಿಕ್ಷಕರು ತನ್ನ ವಿಷಯಗಳ ಬಗ್ಗೆ ಚಿಂತನ ಮಂಥನ ಮಾಡುವಲ್ಲಿ ಶಿಕ್ಷಕರನ್ನು ಪುನಶ್ಚೇತನ ಗೊಳಿಸುವಲ್ಲಿ ಈ ಕಾರ್ಯಾಗಾರ ಅರ್ಥಪೂರ್ಣ ಮತ್ತು ಅವಶ್ಯಕ  ಎಂದು ಹೇಳಿದರು.

ವೇದಿಕೆಯಲ್ಲಿ ‌ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಬಂಟ್ವಾಳ ಕ್ಷೇತ್ರ ಸಮನ್ವಯಧಿಕಾರಿ ರಾಘವೇಂದ್ರ ಬಳ್ಳಾಲ್, ಶಿಕ್ಷಣ ಸಂಯೋಜಕಿ  ಸುಜಾತ, ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ರಾದ ಚೆನ್ನಕೇಶವ, ಜಿಲ್ಲಾ ಸಂಘದ ಕಾರ್ಯಾರ್ಶಿ ಬಿ.ಎಂ.ರಫೀಕ್ ತುಂಬೆಯವರು ಉಪಸ್ಥಿತರಿದ್ದರು.

ತಾರನಾಥ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು ಮುರಳಿ ಕೃಷ್ಣ ರಾವ್ ರವರು ಧನ್ಯವಾದವಿತ್ತರು.
ಡ್ರಾಯಿಂಗ್ ಗ್ರೇಡ್ ಪರೀಕ್ಷೆಯ ವಿಷಯಗಳ ಬಗ್ಗೆ ತರಬೇತಿಯನ್ನು ಮುರಳೀಕೃಷ್ಣ ಆಚಾರ್ಯ ಮತ್ತು ಮುರಳಿಕೃಷ್ಣ ರಾವ್ ರವರು ನಡೆಸಿಕೊಟ್ಟರು.

Ads on article

Advertise in articles 1

advertising articles 2

Advertise under the article

ಸುರ