-->
1000938341
ನಾಳೆ ದೇಶದ 8ಕೋಟಿಗೂ ಅಧಿಕ ಮಂದಿಯ ಖಾತೆಗೆ ಜಮೆಯಾಗಲಿದೆ 18 ಸಾವಿರ ಕೋಟಿ ರೂ.

ನಾಳೆ ದೇಶದ 8ಕೋಟಿಗೂ ಅಧಿಕ ಮಂದಿಯ ಖಾತೆಗೆ ಜಮೆಯಾಗಲಿದೆ 18 ಸಾವಿರ ಕೋಟಿ ರೂ.

ನವದೆಹಲಿ: ನಾಳೆ ದೇಶದ 8 ಕೋಟಿಗೂ ಅಧಿಕ ಮಂದಿಯ ಬ್ಯಾಂಕ್ ಖಾತೆಗೆ 18 ಸಾವಿರ ಕೋಟಿ ರೂಪಾಯಿ ಜಮೆ ಆಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಖುದ್ದಾಗಿ ಈ ಹಣ ಬಿಡುಗಡೆ ಮಾಡಲಿದ್ದಾರೆ.

ಜಾರ್ಖಾಂಡ್‌ನ ಖುಂಟಿಯ ಬಿರ್ಸಾ ಕಾಲೇಜಿನಲ್ಲಿ ನಾಳೆ ನಡೆಯಲಿರುವ ‘ಬುಡಕಟ್ಟು ಹೆಮ್ಮೆಯ ದಿನ’ದ ಸಂದರ್ಭ ಮೋದಿಯವರು ಪಿಎಂ-ಕಿಸಾನ್ ಯೋಜನೆಯ 15ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಅವರು ಬಟನ್ ಕ್ಲಿಕ್ ಮಾಡುತ್ತಿದ್ದಂತೆ 8 ಕೋಟಿಗಿಂತ ಅಧಿಕ ಮಂದಿ ರೈತರ 15ನೇ ಕಂತಿನ ಬಾಬ್ತು ಒಟ್ಟು 18,000 ಕೋಟಿ ರೂ. ಸ್ವೀಕರಿಸಲಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ ಯೋಜನೆಗಳಲ್ಲಿ ಒಂದಾಗಿದೆ. ಈ ಕಂತಿನ ಬಿಡುಗಡೆಯೊಂದಿಗೆ ಈ ಯೋಜನೆಯ ಪ್ರಾರಂಭದಿಂದ ಇದುವರೆಗೆ ಬಿಡುಗಡೆಯಾದ ಒಟ್ಟು ಮೊತ್ತ 2.8 ಲಕ್ಷ ಕೋಟಿ ರೂ. ಮೊತ್ತವನ್ನು ದಾಟಲಿದೆ.

ನಿಗದಿತ ಮಾನದಂಡಕ್ಕೆ ಒಳಪಟ್ಟ ಎಲ್ಲ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು 2019ರ ಫೆ. 24ರಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ರೂ. ಆರ್ಥಿಕ ಲಾಭವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೋಡ್ ಮೂಲಕ ದೇಶಾದ್ಯಂತ ರೈತರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ವರೆಗೆ ದೇಶಾದ್ಯಂತ 11 ಕೋಟಿಗೂ ಹೆಚ್ಚು ರೈತರಿಗೆ 2.61 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಪ್ರಯೋಜನ ಈ ಮೂಲಕ ಒದಗಿಸಲಾಗಿದೆ.

Ads on article

Advertise in articles 1

advertising articles 2

Advertise under the article