-->
ತನಗೆ ವಂಚನೆ ಎಸಗಿರುವ ವ್ಯಕ್ತಿಗೆ ಪಕ್ಷದ ಮುಖಂಡರಿಂದ ಬೆಂಬಲ: ಬಿಜೆಪಿ ತೊರೆದ ನಟಿ ಗೌತಮಿ

ತನಗೆ ವಂಚನೆ ಎಸಗಿರುವ ವ್ಯಕ್ತಿಗೆ ಪಕ್ಷದ ಮುಖಂಡರಿಂದ ಬೆಂಬಲ: ಬಿಜೆಪಿ ತೊರೆದ ನಟಿ ಗೌತಮಿ

ಚೆನ್ನೈ: ನಟಿ, ರಾಜಕಾರಣಿ ಗೌತಮಿಯವರು ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ. ತನಗೆ ವಿಶ್ವಾಸದ್ರೋಹವೆಸಗಿರುವ ವ್ಯಕ್ತಿಗೆ ಬಿಜೆಪಿ ನಾಯಕರು ಸಹಾಯ ಮಾಡುತ್ತಿದ್ದಾರೆ. ಆದ್ದರಿಂದ ತನಗೆ ಬಹಳ ದುಃಖವಾಗಿದೆ.‌ ಆದ್ದರಿಂದ ತಾನು ಬಿಜೆಪಿಗೆ ರಾಜಿನಾಮೆ ನೀಡುತ್ತಿರುವುದಾಗಿ ಅವರು ಟ್ವಿಟ್ ಮಾಡಿದ್ದಾರೆ.

ನಾನು ಇದೀಗ ಬದುಕಿನ ಊಹಿಸಲಾಗದ ಬಿಕ್ಕಟ್ಟಿನ ಸನ್ನಿವೇಶದಲ್ಲಿದ್ದೇನೆ. ಪಕ್ಷದಿಂದ ಹಾಗೂ ಅದರ ನಾಯಕರಿಂದ ನನಗೆ ಬೆಂಬಲವಿಲ್ಲ. ಅಲ್ಲದೆ ಅವರಲ್ಲಿ ಹಲವರು ನನ್ನನ್ನು ವಂಚಿಸಿದ ಹಾಗೂ ನನ್ನ ಜೀವಮಾನದ ಉಳಿತಾಯವನ್ನೇ ಕಸಿದ ವ್ಯಕ್ತಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆಂಬುದು ನನ್ನ ಗಮನಕ್ಕೆ ಬಂದಿದೆ'' ಎಂದು ಅವರು ಬರೆದಿದ್ದಾರೆ.

ಗೌತಮಿ ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ. ತಮ್ಮಟೀಟ್‌ನಲ್ಲಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರನ್ನು ಟ್ಯಾಗ್ ಮಾಡಿದ್ದಾರೆ. ತಮ್ಮ ರಾಜಿನಾಮೆಯ ನಿರ್ಧಾರ ದುಃಖದಿಂದ ಕೂಡಿದೆಯಾದರೂ ದೃಢವಾಗಿದೆ ಎಂದು ಅವರು ಹೇಳಿದ್ದಾರೆ. ಇಲ್ಲಿ ತಮ್ಮನ್ನು ವಂಚಿಸಿದ ವ್ಯಕ್ತಿ ಸಿ ಅಲಗಪ್ಪನ್ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

“20 ವರ್ಷಗಳ ಹಿಂದೆ ನನ್ನ ದುರ್ಬಲತೆಯ ಲಾಭವನ್ನು ಅವರು ಪಡೆದಿದ್ದರು, ನಾನು ಆಗಷ್ಟೇ ನನ್ನ ಹೆತ್ತವರನ್ನೂ ಕಳೆದುಕೊಂಡು ಅನಾಥೆಯಾಗಿದ್ದ ಹಾಗೂ ಪುಟ್ಟ ಮಗುವೊಂದರ ಒಂಟಿ ತಾಯಿಯಾಗಿದ್ದ ಸಂದರ್ಭ ಅವರು ನನ್ನನ್ನು ನೋಡಿಕೊಳ್ಳುವ ಭರವಸೆಯೊಂದಿಗೆ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ನನಗೆ ಹತ್ತಿರವಾಗಿಸಿದ್ದರು. ನನ್ನ ಹಲವು ಜಮೀನುಗಳ ದಾಖಲೆಯನ್ನು ಅವರಿಗೆ ನೀಡಿ ಅವುಗಳ ಮಾರಾಟದ ಜವಾಬ್ದಾರಿ ನೀಡಿದ್ದೆ. ಆದರೆ ಅವರ ವಂಚನೆ ಇತ್ತೀಚೆಗಷ್ಟೇ ನನ್ನ ಗಮನಕ್ಕೆ ಬಂತು, ಇಷ್ಟು ಸಮಯ ನನ್ನನ್ನು ಮತ್ತು ನನ್ನ ಮಗಳನ್ನು ಅವರ ಕುಟುಂಬದಂತೆ ಎಂದು ತೋರ್ಪಡಿಸುವ ಯತ್ನ ಮಾಡಿದ್ದರು,'' ಎಂದು ಗೌತಮಿ ಬರೆದಿದ್ದಾರಲ್ಲದೆ ಏಕಾಂಗಿಯಾಗಿ ತಾವು ನ್ಯಾಯಕ್ಕಾಗಿ ಹೋರಾಡುತ್ತಿರುವುದಾಗಿಯೂ ಹೇಳಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article