ಚಿಲ್ಲರೆ ನಾಣ್ಯಗಳನ್ನೇ ನೀಡಿ ಐಫೋನ್ 15 ಮೊಬೈಲ್ ಖರೀದಿಸಿದ ಭಿಕ್ಷುಕ


ಹೈದರಾಬಾದ್: ಪ್ರತಿಯೊಬ್ಬರೂ ಐಫೋನ್ ಖರೀದಿಸಲು ಬಯಸುತ್ತಾರೆ. ಸದಾ ನಮ್ಮ ಕೈಯಲ್ಲಿ ಐಫೋನ್ ಇರಬೇಕೆಂದು ಆಸೆ ಪಡುತ್ತಾರೆ. ಆದರೆ ಜನಸಾಮಾನ್ಯರಿಗೆ ಐಫೋನ್ ಫೋನ್ ಖರೀದಿಸಲು ಸಾಧ್ಯವಿಲ್ಲ. ಯಾಕೆಂದರೆ ಅಷ್ಟೊಂದು ದುಬಾರಿ ಎಂದು ಹೆಚ್ಚಿನವರು ಐಫೋನ್​​ ಖರೀದಿಸಲು ಹಿಂಜರಿಯುತ್ತಾರೆ.

ಆದರೆ ಇಲ್ಲೊಬ್ಬ ಭಿಕ್ಷುಕ ಐಫೋನ್ ಖರೀದಿಸಲು ಹೋದರೆ, ಅಂಗಡಿಯ ವ್ಯವಸ್ಥಾಪಕರು ಹೇಗೆ ಪ್ರತಿಕ್ರಿಯಿಸುತ್ತಾರೆ? ಅವರು ತಮ್ಮ ಮಳಿಗೆಗಳ ಒಳಗೆ ಭಿಕ್ಷುಕನನ್ನು ಅನುಮತಿಸುತ್ತಾರೆಯೇ? ನಗದು ಬದಲಿಗೆ ನಾಣ್ಯಗಳನ್ನು ತೆಗೆದುಕೊಳ್ಳಲು ಒಪ್ಪುತ್ತಾರೆಯೇ? ಎಂಬ ವಿಡಿಯೋವೊಂದು ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​​ ಆಗಿದೆ.


ಯುವಕನೊಬ್ಬ ಭಿಕ್ಷುಕನ ವೇಷ ಧರಿಸಿ ಮೊದಲು ಜೋಧ್‌ಪುರದ ರಸ್ತೆಯಲ್ಲಿರುವ ಹಲವಾರು ಮೊಬೈಲ್ ಶೋರೂಮ್‌ಗಳಿಗೆ ಹೋಗುತ್ತಾನೆ. ಆದರೆ ನಿಜವಾಗಿಯೂ ಈತ ಭಿಕ್ಷುಕನೆಂದೇ ಭಾವಿಸಿದ ಕೆಲವರು ಆತನನ್ನು ಮೊಬೈಲ್ ಮಳಿಗೆ ಒಳಗೆ ಕಾಲಿಡಲು ಬಿಡಲಿಲ್ಲ. ಇತರರು ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರು.

ಕೊನೆಗೊಬ್ಬ ಅಂಗಡಿ ಮಾಲೀಕನೊಬ್ಬ ನಾಣ್ಯಗಳನ್ನು ತೆಗೆದುಕೊಂಡು ಐಫೋನ್ ಪ್ರೊಮ್ಯಾಕ್ಸ್ ನೀಡಿದ್ದಾನೆ. ಇಡೀ ಪ್ರಕ್ರಿಯೆ ಮುಗಿದ ಬಳಿಕ ಭಿಕ್ಷುಕ ತಾನು ನಿಜವಾದ ಭಿಕ್ಷುಕನಲ್ಲ ತಾನು ತಮಾಷೆಗೆಂದು ಭಿಕ್ಷುಕನಂತೆ ನಟಿಸಿ ಮೊಬೈಲ್ ಕೊಳ್ಳಲು ಬಯಸಿದೆ ಎಂದು ಬಹಿರಂಗಪಡಿಸಿದಾಗ ಅಂಗಡಿ ಮಾಲಕ ಸೇರಿದಂತೆ ಅಲ್ಲಿದ್ದವರು ಆಶ್ಚರ್ಯಚಕಿತರಾಗಿದ್ದಾರೆ.


ಯುವಕ ತಾನು ಅಂಗಡಿಯ ಮಾಲೀಕರಿಗೆ ಚೇಷ್ಟೆ ಮಾಡುತ್ತಿದ್ದೇನೆ ಎಂದು ತಿಳಿಯದಂತೆ ನಟಿಸಿದ್ದಾರೆ. ಚೇಷ್ಟೆ ಎಂದು ತಿಳಿದಾಗ ಅಂಗಡಿ ಮಾಲೀಕರು ತಮಾಷೆಗೆ ತೆಗೆದುಕೊಂಡರು. ಅವರೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಿಕ್ಷುಕ ಐಫೋನ್ ಖರೀದಿಸಬೇಕಾ? ಮೊದಲಿಗೆ ಅವರಿಗೆ ಆಶ್ಚರ್ಯವಾಯಿತು ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.