-->

ದಿನ ಭವಿಷ್ಯ - ಸೋಮವಾರದ ಶುಭ ದಿನದಂದು ಶಿವನ ಅನುಗ್ರಹ ಯಾವೆಲ್ಲ ರಾಶಿಗಳಿಗೆ ಇದೆ ಎಂಬುದು ಇಲ್ಲಿದೆ ನೋಡಿ!

ದಿನ ಭವಿಷ್ಯ - ಸೋಮವಾರದ ಶುಭ ದಿನದಂದು ಶಿವನ ಅನುಗ್ರಹ ಯಾವೆಲ್ಲ ರಾಶಿಗಳಿಗೆ ಇದೆ ಎಂಬುದು ಇಲ್ಲಿದೆ ನೋಡಿ!

ಮೇಷ ರಾಶಿ

ಮೇಷ ರಾಶಿಯವರು ಇಂದು ತಾತ್ಕಾಲಿಕವಾಗಿ ಸಾಲ ಕೇಳುವವರನ್ನು ನಿರ್ಲಕ್ಷಿಸಿ. ನಿಮ್ಮ ಸ್ನೇಹಿತರು ಸಂಬಂಧಿಕರಿಂದ ಆಕಸ್ಮಿಕ ಉಡುಗೊರೆಗಳನ್ನು ಪಡೆಯುವಿರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಉದ್ಯೋಗ ವ್ಯವಹಾರದಲ್ಲಿ ಪ್ರಗತಿಯ ಹಾದಿಗಳು ತೆರೆಯಲಿವೆ. 

ವೃಷಭ ರಾಶಿ:  
ಇಂದು ನೀವು ನಿಮ್ಮ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸಿ. ಯಾವುದೇ ರೀತಿಯ ಹೂಡಿಕೆಗಳನ್ನು ತಪ್ಪಿಸಿ. ಇಲ್ಲವೇ ನಷ್ಟ ಅನುಭವಿಸುವ ಸಂಭವವಿರುತ್ತದೆ. ಪತ್ರವ್ಯವಹಾರವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಇಲ್ಲದಿದ್ದರೆ, ನಿಮ್ಮವರಿಂದಲೇ ನೀವು ಮೋಸ ಹೋಗುವ ಸಾಧ್ಯತೆ ಇದೆ. 


ಮಿಥುನ ರಾಶಿ:   
ಮಿಥುನ ರಾಶಿಯವರಿಗೆ ಅನಗತ್ಯ ಆಲೋಚನೆಗಳು ಇಂದು ನಿಮ್ಮನ್ನು ಬಾಧಿಸಬಹುದು. ಇದರಿಂದ ಪರಿಹಾರಕ್ಕಾಗಿ ಧ್ಯಾನ ಮಾಡಿ. ನೀವು ಮಾಡುವ ಕೆಲಸಗಳಿಗೆ ಯಾರೂ ಕ್ರೆಡಿಟ್ ತೆಗೆದುಕೊಳ್ಳಲು ಬಿಡಬೇಡಿ. ಸಂಶಯಾಸ್ಪದ ಹಣಕಾಸು ವ್ಯವಹಾರಗಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸಿ. 

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ನೀವು ಸುಲಭವಾಗಿ ಆಯಾಸವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು. 

ಸಿಂಹ ರಾಶಿ:   
ಸಿಂಹ ರಾಶಿಯವರು ಇಂದು ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆಯಿಂದ ಇರಿ. ಯಾವುದೇ ವಿಚಾರದಲ್ಲಿ ನಿಮ್ಮ ನಿರ್ಲಕ್ಷ್ಯವು ನಿಮಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. 

ಕನ್ಯಾ ರಾಶಿ: 
ಕನ್ಯಾ ರಾಶಿಯವರೇ ನಿಮ್ಮ ಅನಿರೀಕ್ಷಿತ ಸ್ವಭಾವವು ನಿಮ್ಮ ವೈವಾಹಿಕ ಜೀವನದಲ್ಲಿ ಬಿರುಕುಂಟು ಮಾಡಬಹುದು. ಹಾಗಾಗಿ, ನಿಮ್ಮ ಪ್ರೀತಿ ಪಾತ್ರರೊಂದಿಗೆ ನಯವಾಗಿ ನಡೆದುಕೊಳ್ಳಿ. 

ತುಲಾ ರಾಶಿ:  
ಇಂದು ನೀವು ಯೋಗ-ಧ್ಯಾನದೊಂದಿಗೆ ದಿನ ಪ್ರಾರಂಭಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಶುಭ ಸುದ್ದಿ ಕೇಳುವಿರಿ. ಕಠಿಣ ಪರಿಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿ ತಲುಪಿ. 

ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರು ಇಂದು ಸಕಾರಾತ್ಮಕ ಆಲೋಚನೆಗಳೊಂದಿಗೆ ಮುಂದುವರೆದರಷ್ಟೇ ದಿನ ಲಾಭದಾಯಕವಾಗಿರುತ್ತದೆ. ನೀವು ಅಪರೂಪವಾಗಿ ಭೇಟಿಯಾಗುವ ಜನರೊಂದಿಗೆ ಸಂವಹನ ನಡೆಸಲು ಒಳ್ಳೆಯ ದಿನ. 

ಧನು ರಾಶಿ:  
ಧನು ರಾಶಿಯವರಿಗೆ ಅನಿರೀಕ್ಷಿತ ಲಾಭಗಳ ಮೂಲಕ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಸಂಗಾತಿಯ ಆರೋಗ್ಯ ಸ್ವಲ್ಪ ಚಿಂತೆಗೆ ಕಾರಣವಾಗಬಹುದು. 

ಮಕರ ರಾಶಿ:  
ಮಕರ ರಾಶಿಯವರು ಇಂದು ನೀವು ಭಾವನಾತ್ಮಕವಾಗಿ ತುಂಬಾ ದುರ್ಬಲರಾಗಿರುತ್ತೀರಿ. ಹಾಗಾಗಿ, ನಿಮ್ಮ ಮನಸ್ಸಿಗೆ ನೋವುಂಟು ಮಾಡುವವರಿಂದ ನೀವು ದೂರವಿರಿ. ಆಸ್ತಿ ವ್ಯವಹಾರಗಳು ಅಸಾಧಾರಣ ಲಾಭವನ್ನು ತರುತ್ತವೆ. 

ಕುಂಭ ರಾಶಿ:  
ಕುಂಭ ರಾಶಿಯವರು ಇಂದು ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ಇಂದು ನಿಮಗೆ ಅಷ್ಟು ಶುಭ ದಿನವಾಗಿಲ್ಲದ ಕಾರಣ ಹಣಕಾಸಿನ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಮುಂದುವರೆಯಿರಿ. ನಿಮ್ಮ ದೀರ್ಘಕಾಲದ ಜಗಳವನ್ನು ಇಂದೇ ಪರಿಹರಿಸಿಕೊಳ್ಳಿ ಏಕೆಂದರೆ ನಾಳೆ ತುಂಬಾ ತಡವಾಗಬಹುದು.

ಮೀನ ರಾಶಿ:  
ಕೆಲವು ಸೃಜನಶೀಲ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಮತ್ತು ರೋಗದ ವಿರುದ್ಧ ಹೋರಾಡಲು ಪ್ರೇರೇಪಿಸುವುದು ಉತ್ತಮ. ಇಂದು, ನೀವು ಬೇರೆಯವರ ಸಹಾಯವಿಲ್ಲದೆ ವ್ಯಾಪಾರ-ವ್ಯವಹಾರದಲ್ಲಿ ಲಾಭವನ್ನು ಗಳಿಸುವಿರಿ. 



­

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article