ವಿಟ್ಲ: ಸೋದರರಿಂದ ಆತ್ಮಹತ್ಯೆಗೆ ಯತ್ನ - ಓರ್ವನ ಸ್ಥಿತಿ ಗಂಭೀರ
Wednesday, September 13, 2023
ವಿಟ್ಲ: ಇಲ್ಲಿನ ಕುದ್ದುಪದವು ಎಂಬಲ್ಲಿ ಸೋದರರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೈರ ಮೂಲದ ಕುದ್ದುಪದವು ನಿವಾಸಿಗಳಾದ ಪವನ್ ಮತ್ತು ಪೃಥ್ವಿರಾಜ್ ವಿಷ ಸೇವಿಸಿ ಆತ್ಮಹತ್ಯೆಗೆತ್ನಿಸಿದವರು.
ವಿಷ ಸೇವನೆಯಿಂದ ತೀವ್ರ ಅಸ್ವಸ್ಥರಾದ ಇವರಿಬ್ಬರನ್ನು ವಿಟ್ಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ . ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.