ಸೊಳ್ಳೆಗೆ ಹಾಕಿದ್ದ ಹೊಗೆಗೆ ಉಸಿರುಗಟ್ಟಿ ನಾಲ್ವರು ಸಾವು


ದೊಡ್ಡಬಳ್ಳಾಪುರ: ಸೊಳ್ಳೆ ಕಾಟಕ್ಕೆ ಹಾಕಿದ್ದ ಹೊಗೆಯಿಂದ ಉಸಿರುಗಟ್ಟಿ ಕೂಲಿ ಕಾರ್ಮಿಕರಾಗಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.


 ಭಾನುವಾರ ಒಡೆಯರ ಹಳ್ಳಿಯಲ್ಲಿ  ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ಗ್ರಾಮದ ಒಡೆಯರಹಳ್ಳಿ ರಸ್ತೆಯಲ್ಲಿರುವ ಮೋಹನ್‌ ಕುಮಾರ್ ಎಂಬುವರ ಕೋಳಿಫಾರಂ ಶೆಡ್‌ನಲ್ಲಿ ಈ ಘಟನೆ ಸಂಭವಿಸಿದೆ. 
 
ಮೃತರನ್ನು ಕಾಲೇ ಸರೇರಾ (60), ಲಕ್ಷ್ಮಿಸರೇರಾ (50), ಉಷಾ ಸರೇರಾ (40) ಮತ್ತು ಪೊಲ್ ಸರೇರಾ (16) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇ ಸರೇರಾ ಮನೆ ಯಜಮಾನನಾಗಿದ್ದು ಇವರಿಗೆ ಲಕ್ಷ್ಮಿ, ಮತ್ತು ಉಷಾ ಇಬ್ಬರು ಪತ್ನಿಯರು. ಮಗ ಪೊಲ್ ಸರೇರಾ ಮೃತಪಟ್ಟವರು ಪಶ್ಚಿಮ ಬಂಗಾಳ ರಾಜ್ಯದ ಅಲಿಪು‌ ಜಿಲ್ಲೆಯವರೆಂದು ತಿಳಿದು ಬಂದಿದೆ.