ಚೈತ್ರಾ ಕುಂದಾಪುರ ಪ್ರಕರಣ- ಅಭಿನವ ಹಾಲಶ್ರೀ ಸ್ವಾಮೀಜಿ ಅರೆಸ್ಟ್


ಬೆಂಗಳೂರು: ಹಿಂದೂ ನಾಯಕಿ ಚೈತ್ರಾ ಕುಂದಾಪುರ ( CHAITHRA KUNDAPURA)  ಎಂ‌ಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ ಪ್ರಕರಣದಲ್ಲಿ ಎ3 ಆರೋಪಿಯಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು  ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ದಿನದಿಂದ ನಾಪತ್ತೆಯಾಗಿದ್ದ ಸ್ವಾಮೀಜಿ ಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವಾಮೀಜಿ ತಲೆ ಮರೆಸಿಕೊಂಡು‌ ಒಡಿಸ್ಸಾಕ್ಕೆ‌ ಪರಾರಿಯಾಗಿದ್ದರು. ಒಡಿಸ್ಸಾದ ಕಟಕ್ ನಲ್ಲಿ ಇರುವ ಲಾಡ್ಜ್ ನಲ್ಲಿ ಸ್ವಾಮೀಜಿಯನ್ನು ಬಂಧಿಸಲಾಗಿದೆ.

ಬಂಧಿಸಲಾಗಿರುವ ಸ್ವಾಮೀಜಿಯನ್ನು ಒಡಿಸ್ಸಾದ ಕಟಕ್ ಸ್ಥಳೀಯ ‌ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತದೆ.

ಚೈತ್ರಾ ಕುಂದಾಪುರ ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವೆ ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ 5 ಕೋಟಿ ಲೂಟಿ ಮಾಡಿದ್ದು,ಇದರಲ್ಲಿ 1.5 ಕೋಟಿಯನ್ನು ಅಭಿನವ ಹಾಲಶ್ರೀ ಸ್ವಾಮೀಜಿ ಗೆ ನೀಡಲಾಗಿತ್ತು. ಅಭಿನವ ಹಾಲಶ್ರೀ ಸ್ವಾಮೀಜಿ ಈ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದಾರೆ.