ಪುತ್ರಿಯ ಹೆಸರನ್ನು ದೇಹದ ಮೇಲೆ 667 ಟ್ಯಾಟೂ ಹಾಕಿ ವಿಶ್ವ ದಾಖಲೆ ಬರೆದ ತಂದೆ
Tuesday, September 12, 2023
ಬ್ರಿಟನ್: ತಂದೆ - ತಾಯಂದಿರಿಗೆ ತಮ್ಮ ಮಕ್ಕಳ ಮೇಲೆ ಅಗಾಧ ಪ್ರೀತಿ ಇರುತ್ತದೆ. ಆದರೆ ಇಲ್ಲೊಬ್ಬ ಬ್ರಿಟನ್ನ ವ್ಯಕ್ತಿ ತನ್ನ ಪುತ್ರಿಯ ಹೆಸರನ್ನು ಪೂರ್ತಿ ದೇಹದ ಮೇಲೆ ಒಟ್ಟು 667 ಬಾರಿ ಹಚ್ಚೆ ಹಾಕಿಸಿ ವಿಶ್ವದಾಖಲೆಯನ್ನೇ ಮಾಡಿದ್ದಾರೆ.
ಮಾರ್ಕ್ ಓವನ್ ಇವಾನ್ಸ್(49) ತನ್ನ ಏಳು ವರ್ಷದ ಪುತ್ರಿ ಲೂಸಿಯ ಹೆಸರನ್ನು ತನ್ನ ದೇಹದ ಮೇಲೆ ಟ್ಯಾಟೂ ಹಾಕಿಕೊಂಡಿದ್ದಾರೆ. ಬೆನ್ನು, ತೊಡೆ ಸೇರಿದಂತೆ ದೇಹದ ಅನೇಕ ಭಾಗಗಳಲ್ಲಿ ಒಟ್ಟು 667 ಟ್ಯಾಟೂ ಹಾಕಿಕೊಂಡಿದ್ದಾರೆ. ಮಾರ್ಕ್ ತನ್ನ ಬೆನ್ನಿನ ಮೇಲೆ 267 ಬಾರಿ ಲೂಸಿ ಟ್ಯಾಟೂಗಳನ್ನು ಹಾಕಿಕೊಳ್ಳುವ ಮೂಲಕ 2017 ರಲ್ಲಿ ಮೊದಲ ಬಾರಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದರು. ಆದ್ರೆ 2020 ರಲ್ಲಿ ಯುಎಸ್ಎಯ 27 ವರ್ಷದ ಡೀಡ್ರಾ ವಿಜಿಲ್ ತನ್ನ ಹೆಸರನ್ನೇ 300 ಬಾರಿ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಇವಾನ್ಸ್ ದಾಖಲೆ ಮುರಿದಿದ್ದ. ಮಾರ್ಕ್ ಈ ದಾಖಲೆಯನ್ನು ಮರಳಿ ಪಡೆಯಲು ನಿರ್ಧರಿಸಿ ಇದೀಗ ಬೆನ್ನು ಹಾಗೂ ತೊಡೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ಮೂಲಕ ಮತ್ತೆ ದಾಖಲೆ ಬರೆದಿದ್ದಾನೆ.
ಪ್ರತಿ ಕಾಲಿನ ಮೇಲೆ 200 ಟ್ಯಾಟೂಗಳಂತೆ 400 ಟ್ಯಾಟೂ ಹಾಕಲು ಐದೂವರೆ ಗಂಟೆಗಳನ್ನು ತೆಗೆದುಕೊಳ್ಳಲಾಗಿದೆ. ಮಾರ್ಕ್, ಲೂಸಿ ಜನ್ಮದಿನ ಹಾಗೂ ಆಸ್ಪತ್ರೆಗೆ ಹಣ ನೀಡುವ ಉದ್ದೇಶದಿಂದ ಈ ದಾಖಲೆ ಬರೆಯುವ ನಿರ್ಧಾರಕ್ಕೆ ಬಂದಿದ್ದ. ಮಾರ್ಕ್ ತನ್ನ ದೇಹದ ಎಲ್ಲ ಕಡೆ ಪುತ್ರಿಯ ಹೆಸರನ್ನು ಬರೆದುಕೊಂಡಿದ್ದಾನೆ. ಇಬ್ಬರು ಟ್ಯಾಟೂ ಕಲಾವಿದರು ಈ ಹಚ್ಚೆ ಹಾಕಿದ್ದಾರೆ. ಈ ಕುರಿತಾಗಿ ಮಾತನಾಡಿದ ಮಾರ್ಕ್, ದಾಖಲೆ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೆ. ಇದನ್ನು ಪುತ್ರಿಗೆ ಅರ್ಪಿಸುತ್ತೇನೆ. ಆ ಹೆಸರು ಸದಾ ನನ್ನ ಜೊತೆಗಿರುತ್ತದೆ ಎಂದು ಹೆಮ್ಮೆ ಪಡುತ್ತೇನೆ ಎನ್ನುತ್ತಾರೆ.