ಕೆನರಾ ಬ್ಯಾಂಕ್‌, ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಶಾಕ್‌! ಸಾಲ ಪಡೆದವರಿಗೆ EMIನಲ್ಲಿ ವ್ಯತ್ಯಾಸ

ಕೆನರಾ ಬ್ಯಾಂಕ್‌, ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಶಾಕ್‌! ಸಾಲ ಪಡೆದವರಿಗೆ EMIನಲ್ಲಿ ವ್ಯತ್ಯಾಸ




ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಕೆನರಾ ಬ್ಯಾಂಕ್‌, ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ.


ಭಾರತೀಯ ರಿಸರ್ವ್ ಬ್ಯಾಂಕ್‌ ತನ್ನ ರೆಪೋ ರೇಟ್‌ನಲ್ಲಿ ಯಥಾಸ್ಥಿತಿ ಕಾಯ್ದುಕಂಡಿದ್ದರೂ ಈ ಎರಡು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಹೊರೆ ಹಾಕಿದೆ. ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿ ಶಾಕಿಂಗ್ ನ್ಯೂಸ್‌ ನೀಡಿದೆ.


ಸಾಲ ಪಡೆದವರಿಗೆ EMIನಲ್ಲಿ ವ್ಯತ್ಯಾಸ ಆಗಲಿದ್ದು, ಮರುಪಾವತಿ ಹಣದಲ್ಲಿ ಬಡ್ಡಿ ಪ್ರಮಾಣ ಹೆಚ್ಚಲಿದ್ದು, ಅಸಲು ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ಸಾಲಗಾರರು ಇನ್ನಷ್ಟು ದೀರ್ಘ ಸಮಯದ ವರೆಗೆ EMI ಕಟ್ಟಬೇಕಾಗುತ್ತದೆ.


ಕೆನರಾ ಬ್ಯಾಂಕ್‌ ಶನಿವಾರದಿಂದಲೇ ಜಾರಿಗೆ ಬರುವಂತೆ ತನ್ನ ಬಡ್ಡಿ ಮೇಲಿನ ಸಾಲವನ್ನು ಪರಿಷ್ಕರಿಸಿದೆ. MCLR ದರವನ್ನು ಶೇ. 0.50ರಷ್ಟು ಹೆಚ್ಚಿಸಿದ್ದು, ಬಡ್ಡಿ ದರ 8.70ಕ್ಕೇರಿದೆ.


ಬ್ಯಾಂಕ್ ಆಫ್ ಬರೋಡ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡ ಇದೇ ರೀತಿ ಬಡ್ಡಿ ದರ ಹೆಚ್ಚಿಸಿ ಗ್ರಾಹಕರಿಗೆ ತಲೆ ನೋವು ಉಂಟುಮಾಡಿದೆ.