-->
1000938341
ರೀಲ್ಸ್ ಹುಚ್ಚಿಗೆ ಪತಿಯಿಂದಲೇ ಪತ್ನಿ ಬಲಿ : ಅಳಿಯನಿಗೆ ಮಾವ ಸಾಥ್

ರೀಲ್ಸ್ ಹುಚ್ಚಿಗೆ ಪತಿಯಿಂದಲೇ ಪತ್ನಿ ಬಲಿ : ಅಳಿಯನಿಗೆ ಮಾವ ಸಾಥ್


ಮಂಡ್ಯ: ರೀಲ್ಸ್​ ವ್ಯಾಮೋಹವು ಯುವತಿಯ ಪ್ರಾಣವನ್ನೇ ಕಸಿದಿದೆ. ಈಕೆಯ ರೀಲ್ಸ್​ ಹುಚ್ಚಿನಿಂದ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾದ ಹಿನ್ನೆಲೆಯಲ್ಲಿ ಈಕೆ ತನ್ನ ಪತಿಯಿಂದಲೇ ಬರ್ಬರ ಹತ್ಯೆಯಾಗಿದ್ದಾಳೆ. ಈ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲಿನಲ್ಲಿ ನಡೆದಿದೆ. 

ಪೂಜಾ (26) ಮೃತ ಯುವತಿ. ಈಕೆಯ ಪತಿ ಶ್ರೀನಾಥ್​ (36) ಹತ್ಯೆ ಮಾಡಿರುವ ಆರೋಪಿ.

ಪೂಜಾ ಯಾವಾಗಲೂ ರೀಲ್ಸ್​ನಲ್ಲಿ ಮುಳುಗಿರುತ್ತಿದ್ದಳು. ಅಲ್ಲದೆ, ತನ್ನ ಸ್ನೇಹಿತರೊಂದಿಗೂ ಚಾಟಿಂಗ್​ ಮಾಡುತ್ತಿದ್ದಳು. ಯಾವಾಗಲೂ ಮೊಬೈಲ್​ನಲ್ಲಿ ಮುಳುಗಿರುತ್ತಿದ್ದ ಪೂಜಾಳನ್ನು ಕಂಡು ಪತಿಗೆ ಸಂಶಯ ಉಂಟಾಗಿದೆ. ಪರಪುರುಷನೊಂದಿಗೆ ತನ್ನ ಪತ್ನಿಗೆ ಅನೈತಿಕ ಸಂಬಂಧ ಇರಬಹುದೆಂಬ ಅನುಮಾನ ಉಂಟಾಗಿದೆ. ಇದೇ ಅನುಮಾನ ಪ್ರೀತಿಸಿ ವಿವಾಹವಾಗಿದ್ದ ಪತ್ನಿಯನ್ನೇ ಕೊಲೆ ಮಾಡುವ ಹಂತಕ್ಕೆ ತಂದು ನಿಲ್ಲಿಸಿದೆ. ಅದಕ್ಕಾಗಿ ಈತ ವೇಲ್​ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ 3 ದಿನ ಬಳಿಕ 102ಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಪೂಜಾ ಹಾಗೂ ಶ್ರೀನಾಥ್, 9 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಒಂದು ಹೆಣ್ಣು ಮಗುವೂ ಇದೆ. ಆದರೆ, ಹಲವು ವರ್ಷಗಳಿಂದ ಪೂಜಾ ರೀಲ್ಸ್​ ಮತ್ತು ಶಾರ್ಟ್ಸ್​ ಮೇಲಿನ ವ್ಯಾಮೋಹವನ್ನು ಬೆಳೆಸಿಕೊಂಡಿದ್ದಳು. ರೀಲ್ಸ್ ನೊಂದಿಗೆ ಬಹಳಷ್ಟು ಹೊತ್ತು ಫೋನ್ ಬಳಸುತ್ತಿದ್ದಳು. ಅತಿಯಾದ ಫೋನ್ ಬಳಕೆಯಿಂದ ದಾಂಪತ್ಯದಲ್ಲಿ ಬಿರುಕು ಮೂಡಿ ಪತಿ - ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪರಪುರುಷರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆಂದು ಅನುಮಾನ ವ್ಯಕ್ತಪಡಿಸಿ ಶ್ರೀನಾಥ್ ಯಾವಾಗಲೂ ಗಲಾಟೆ ಮಾಡುತ್ತಿದ್ದ. ಇದೇ ಜಗಳ ಮೂರು ದಿನಗಳ ಹಿಂದೆ ತಾರಕಕ್ಕೇರಿ ತಾಳ್ಮೆ ಕಳೆದುಕೊಂಡ ಶ್ರೀನಾಥ್​, ವೇಲ್​ನಿಂದ ಪೂಜಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

ಕೊಲೆಯ ಬಳಿಕ ಮೃತದೇಹ ಸಾಗಿಸಲು ಮಾವನೇ ಅಳಿಯನಿಗೆ ಸಾಥ್ ನೀಡಿದ್ದಾರೆ. ಅಳಿಯನೊಂದಿಗೆ ಸೇರಿ ತನ್ನ ಪುತ್ರಿಯ ಮೃತದೇಹವನ್ನು ಕಾವೇರಿ ನದಿಗೆ ಎಸೆದು ಬಂದಿದ್ದರು. ಇದಕ್ಕೂ ಮೊದಲು ಕೊಲೆಗೈದ ಬಳಿಕ ಶ್ರೀನಾಥ್​, ತನ್ನ ಮಾವ ಶೇಖರ್​ಗೆ ಕರೆ ಮಾಡಿ, ಕೊಲೆ ಮಾಡಿರುವುದನ್ನು ತಿಳಿಸಿದ್ದ. ಪುತ್ರಿಯ ಕೊಲೆ ಬಗ್ಗೆ ತಿಳಿದರೂ ಅದನ್ನು ಪೊಲೀಸರಿಗೆ ಹೇಳದೆ ಅಳಿಯನಿಗೆ ಶೇಖರ್​ ಸಾಥ್ ನೀಡಿದ್ದಾರೆ. ಮನೆಯಿಂದ ಬೈಕ್ ನಲ್ಲಿ ಮೃತದೇಹ ಸಾಗಿಸಿ, ಬಳಿಕ ಮೃತದೇಹಕ್ಕೆ ಭಾರವಾದ ಕಲ್ಲು ಕಟ್ಟಿ ನದಿಗೆ ಎಸೆದು ಬಂದಿದ್ದಾರೆ.


Ads on article

Advertise in articles 1

advertising articles 2

Advertise under the article