-->
ತಂದೆಯಿಂದಲೇ 8 ತಿಂಗಳ ಮಗು ಅಪಹರಣ!

ತಂದೆಯಿಂದಲೇ 8 ತಿಂಗಳ ಮಗು ಅಪಹರಣ!


ಚಿಂಚೋಳಿ: ಚಿಂಚೋಳಿ ತಾಲೂಕಿನ ಯಂಪಳ್ಳಿ ಗ್ರಾಮದಲ್ಲಿ ಸ್ವತಃ ತಂದೆಯೇ ಗುಂಪು ಕಟ್ಟಿಕೊಂಡು 8 ತಿಂಗಳ  ಮಗುವನ್ನು ಅಪಹರಣ ಮಾಡಿದ ಘಟನೆ ಭಾನುವಾರ ಚಿಂಚೋಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

 ಶರಣಪ್ಪ ಎಂಬಾತನೇ ಮಗು ಅಪಹರಣ ಮಾಡಿದ ತಂದೆ. ಬೀದ‌ರ್ ಜಿಲ್ಲೆಯ ಚಿಟಗುಪ್ಪ ಗ್ರಾಮದ ಶರಣಪ್ಪನ ಜತೆಗೆ ಮದುವೆಯಾಗಿದ್ದ ಗೌರಮ್ಮಳಿಗೆ ಪತಿಯ ಮನೆಯವರು ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಯಾರು ಹೇಳಿದರೂ ಕೇಳದಿದ್ದಾಗ ಗೌರಮ್ಮಳನ್ನು ತಂದೆ ತವರು ಮನೆಗೆ ಕರೆದುಕೊಂಡು ಬಂದಿದ್ದರು. 
 
ತವರಿನಲ್ಲಿ ಗೌರಮ್ಮ ಗಂಡು ಮಗುವಿಗೆ ಜನ್ಮ ನೀಡಿ ನಂತರ ಸಂಬಂಧಿಕರು ರಾಜಿ ಸಂಧಾನ ಮಾಡಿಸಿ ಮತ್ತೆ `ಗಂಡನ ಮನೆಗೆ ಕಳುಹಿಸಿದ್ದರು. ಗಂಡನ ಮನೆಯವರು ಮತ್ತೆ ಜಗಳ ಶುರು ಮಾಡಿದ್ದರಿಂದ ಗೌರಮ್ಮಳನ್ನು ತಂದೆ ಮತ್ತೆ ತವರಿಗೆ ಕರೆದುಕೊಂಡು ಬಂದಿದ್ದಾರೆ. 

ಭಾನುವಾರ ಬೆಳಗಿನ ಜಾವ ವಾಹನಗಳಲ್ಲಿ ಕೆಲವರನ್ನು ಗುಂಪು ಕಟ್ಟಿಕೊಂಡು ಬಂದು ಮಾವನ ಮನೆಗೆ ನುಗ್ಗಿ ಪತ್ನಿ ಮತ್ತು ಅತ್ತೆ ಜತೆ ತೆಗೆದು ತಿಂಗಳ ಮಗುವನ್ನು 8 ಅಪಹರಣ ಮಾಡಿಕೊಂಡು ಓಡಿ ಹೋಗಿದ್ದಾನೆ. ಈ ವೇಳೆ ಗ್ರಾಮಸ್ಥರು ಅಡ್ಡ ಬಂದು ಅಪಹರಣಕಾರರನ್ನು ಹಿಡಿಯಲು ಪ್ರಯತ್ನ ಮಾಡಿದ್ದಾರೆ. ಇವರಲ್ಲಿ ಒಬ್ಬ ವ್ಯಕ್ತಿ ಸಿಕ್ಕಿ ಬಿದ್ದಿದ್ದು, ಆತನನ್ನು ಗಿಡಕ್ಕೆ ಕಟ್ಟಿಹಾಕಿ ವಿಚಾರಣೆ ನಡೆಸಿದಾಗ ಎಲ್ಲವನ್ನು ಬಾಯಿ ಬಿಟ್ಟಿದ್ದಾನೆ

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article