-->
ಮಂಗಳೂರು: ವಿವಾಹವಾಗುವುದಾಗಿ ವಂಚಿಸಿ ವಿಚ್ಛೇದಿತೆಗೆ 64ಲಕ್ಷ ದೋಖಾ

ಮಂಗಳೂರು: ವಿವಾಹವಾಗುವುದಾಗಿ ವಂಚಿಸಿ ವಿಚ್ಛೇದಿತೆಗೆ 64ಲಕ್ಷ ದೋಖಾ


ಮಂಗಳೂರು: ವಿವಾಹವಾಗುವುದಾಗಿ ನಂಬಿಸಿ ವಿಚ್ಛೇದಿತೆಯಿಂದ ವ್ಯವಹಾರದ ನೆಪದಲ್ಲಿ 64 ಲಕ್ಷ ರೂ. ಪಡೆದು ಹಿಂದಿರುಗಿಸದೆ ವಂಚನೆಗೈದಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ನಗರದ ಸೆನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೈದ ವ್ಯಕ್ತಿಯ ಮೇಲೆ ಮಹಿಳೆ ದೂರು ನೀಡಿದ್ದಾರೆ. ಆಕೆ ನೀಡಿರುವ ದೂರಿನಲ್ಲಿ 'ತನಗೆ ಅಣ್ಣಂದಿರು ಮರು ಮದುವೆ ಮಾಡಲು ತಯಾರಿ ನಡೆಸುತ್ತಿದ್ದರು. ಆದ್ದರಿಂದ ತಾನು ತನ್ನ ಪ್ರೊಫೈಲ್‌ ಅನ್ನು ಮ್ಯಾಟ್ರಿಮೋನಿಯಲ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಿದ್ದೆ. ಈ ವೇಳೆ ತಮಿಳುನಾಡು ಪಳ್ಳಪಟ್ಟಿ ಮೂಲದ ಮುಹಮ್ಮದ್ ಫರೀದ್ ಶೇಖ್ ಎಂಬಾತ ಸಂಪರ್ಕಕ್ಕೆ ಬಂದು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಆದ್ದರಿಂದ ತಾನು ತನ್ನ ಅಣ್ಣಂದಿರೊಂದಿಗೆ ಮಾತುಕತೆ ನಡೆಸಲು ಸೂಚಿಸಿದ್ದೆ. ಅದೇ ರೀತಿ ಮುಹಮ್ಮದ್ ಫರೀದ್ ಶೇಖ್ ಎಂಬಾತನು ತನ್ನ ಸಹೋದರರು ಎಂಬುವುದಾಗಿ ಸಾದಿಕ್ ಮತ್ತು ಮುಬಾರಕ್ ಎಂಬವರನ್ನು ಪರಿಚಯಿಸಿಕೊಂಡು ಕಂಕನಾಡಿಯಲ್ಲಿರುವ ರೆಸ್ಟೋರೆಂಟ್‌ಗೆ ಬಂದಿದ್ದಾನೆ.

ಈ ವೇಳೆ ಆತ ಈ ಹಿಂದೆ ಮದುವೆಯಾಗಿರುದನ್ನು ಮುಚ್ಚಿದ್ದಾನೆ. ಎರಡು ದಿನದ ಬಳಿಕ ಆತ ತನಗೆ ವಾಟ್ಸ್ ಆ್ಯಪ್ ಮೂಲಕ ಮೆಸೇಜ್ ಮಾಡಲು ಆರಂಭಿಸಿದ್ದಾನೆ. ಬಳಿಕ ನಾನಾ ಹಂತಗಳಲ್ಲಿ 64 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಸಂತ್ರಸ್ತ ಮಹಿಳೆ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article